ಕರ್ನಾಟಕ ರಾಜ್ಯ ಸರ್ಕಾರ ಉಚಿತ ಬಸ್ ವ್ಯವಸ್ಥೆ ಮಹಿಳೆಯರಿಗೆ ಕಲ್ಪಿಸಿದೆ ಆದರೂ ಕೊಂಚ ಇಲ್ಲಿ ಬಸ್ ಹತ್ತುವಾಗ ಬಸ್ಸನ್ನು ಪರೀಕ್ಷಿಸಿ ಹತ್ತಬೇಕಾಗುತ್ತದೆ. ಏಕೆಂದರೆ ಬಸ್ ನಲ್ಲಿ ಫುಡ್ ಬೋರ್ಡ್ ಕಳಚಿದೆ. ಬಸ್ಸಿನ ಹಿಂಬದಿ ರಸ್ತೆ ಕಾಣಿಸುತ್ತದೆ. ಡಕೋಟಾ ಬಸ್ಸು ಕಾರ್ಕಳ ಉಡುಪಿ ರಸ್ತೆಯಲ್ಲಿ ಸಂಚರಿಸುತ್ತದೆ. ಇದು ಕಾಣಸಿಕ್ಕಿದ್ದು ಇವತ್ತು ಬೆಳಿಗ್ಗೆ ಹಿರಿಯಡ್ಕ ಪೇಟೆಯಲ್ಲಿ. ಸ್ಥಳೀಯರಾದ ಹೆರ್ಗದ ವಿಕಾಸ್ ಅವರು ದಿನನಿತ್ಯ ಬೆಳಗಿನ ಕೆಲಸಕ್ಕೆ ವಾಹನದಲ್ಲಿ ತೆರಳಿದಾಗ ಈ ಡಕೋಟ ಸರ್ಕಾರಿ ಬಸ್ ಕಾಣ ಸಿಕ್ಕಿದೆ.. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ವ್ಯವಸ್ಥೆಗೆ ಉತ್ತಮ ಗುಣಮಟ್ಟಕ್ಕೆ ಪ್ರಶಸ್ತಿಗಳ ಮೇಲೆ ಪ್ರಶಸ್ತಿ ಬರುವ ಸಂದರ್ಭದಲ್ಲಿ ಈ ರೀತಿಯ ಡಕೋಟಾ ಬಸುಗಳನ್ನು ಏಕೆ ಓಡಿಸುತ್ತಾರೆ. ಪ್ರಜ್ಞಾವಂತರ ನಾಡಿನಲ್ಲಿ ಖಾಸಗಿ ಮತ್ತು ಸರಕಾರಿ ಬಸ್ಸಿಗೆ ಪೈಪೋಟಿ ಇರುವ ಸಂದರ್ಭದಲ್ಲಿ ಇಂತಹ ಫುಟ್ ಬೋರ್ಡ್ ಇಲ್ಲದ ಬಸ್ಸುಗಳನ್ನು ಓಡಿಸುವುದು ಕಂಡುಬಂದಿದೆ. ಸಂಬಂಧಪಟ್ಟವರು ಇತ್ತ ಕಡೆ ಗಮನಿಸಿ ಇಂತಹ ಬಸ್ಸುಗಳನ್ನು ದುರಸ್ತಿ ಕಾಣುವಂತೆ ಮಾಡಬೇಕು. ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.