Header Ads Widget

ಎಂಟನೇ ವಯಸ್ಸಿನಲ್ಲಿ ಅಪ್ಪನಿಂದಲೇ ದೌರ್ಜನ್ಯಕ್ಕೊಳಗಾಗಿದ್ದೆ: ಖುಷ್ಬು ಸುಂದರ್


ಮಲಯಾಳಂ ಚಲನಚಿತ್ರೋದ್ಯಮದಲ್ಲಿ ‘#MeToo’ ಆರೋಪಗಳು ಕೇಳಿ ಬಂದಿದ್ದು, ಹಲವಾರು ನಟರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಮೀಟೂ ಆರೋಪಗಳು ಮಾಲಿವುಡ್ನ್ನು ನಡುಗಿಸಿರುವ ಈ ಹೊತ್ತಲ್ಲೇ ನಟಿ,ರಾಜಕಾರಣಿ ಖುಷ್ಬು ಸುಂದರ್ ತನ್ನ ಎಂಟನೇ ವಯಸ್ಸಿನಲ್ಲಿ ತನ್ನ ತಂದೆಯಿಂದ ಆದ ದೌರ್ಜನ್ಯದ ಬಗ್ಗೆ ಮಾತನಾಡಿದ್ದಾರೆ. ಇದು 2023 ರಲ್ಲಿಯೇ ಅವರು ಈ ಬಗ್ಗೆ ಹೇಳಿದ್ದು, ಈ ಬಗ್ಗೆ ನಾನು ಮೊದಲೇ ಮಾತನಾಡಬೇಕಿತ್ತು ಎಂದಿದ್ದಾರೆ. ನನ್ನ ಬದುಕಿನಲ್ಲಿ ಸಂಭವಿಸಿದ್ದು ಏನು ಎಂದರೆ ನಾನು ವೃತ್ತಿಜೀವನದಲ್ಲಿ ಮೇಲಕ್ಕೇರಲು ರಾಜಿ ಮಾಡಬೇಕಾಗಿ ಬಂದಿಲ್ಲ. ಆದರೆ ನಾನು ಬಿದ್ದರೆ ನನ್ನನ್ನು ಹಿಡಿದಿಡಲು ಬಲವಾದ ತೋಳುಗಳನ್ನು ಒದಗಿಸಬೇಕಿದ್ದ ವ್ಯಕ್ತಿಯ ಕೈಯಲ್ಲಿಯೇ ನಾನು ದೌರ್ಜನ್ಯ ಅನುಭವಿಸಿದ್ದೇನೆ ”ಎಂದು ಅವರು ಎಕ್ಸ್‌ ಪೋಸ್ಟ್ ನಲ್ಲಿ ಬರೆದಿದ್ದಾರೆ. ನಮ್ಮ ಉದ್ಯಮದಲ್ಲಿ #MeToo ಕತೆ ಕೇಳಿದರೆ ನಿಮಗೆ ಆಘಾತವಾಗಬಹುದು. ತಮ್ಮ ನೆಲೆಯಲ್ಲಿ ನಿಂತು ವಿಜಯಶಾಲಿಯಾಗಿ ಹೊರಹೊಮ್ಮಿದ ಮಹಿಳೆಯರಿಗೆ ಅಭಿನಂದನೆಗಳು. ದೌರ್ಜನ್ಯದ ಬಗ್ಗೆ ದನಿಯೆತ್ತಲು ಹೇಮಾ ಸಮಿತಿಯ ಅಗತ್ಯವಿತ್ತು. ಆದರೆ ಅದು ಆಗುತ್ತದೆಯೇ? ನಿಂದನೆ, ಲೈಂಗಿಕ ತೃಷೆ ತಣಿಸಲು ಕೇಳುವುದು ಮತ್ತು ಮಹಿಳೆಯರು ತಮ್ಮ ಹಿಡಿತವನ್ನು ಪಡೆಯಲು ಅಥವಾ ತಮ್ಮ ವೃತ್ತಿಜೀವನದಲ್ಲಿ ಮೇಲಕ್ಕೇರಲ ರಾಜಿ ಮಾಡಿಕೊಳ್ಳಬೇಕೆಂದು ನಿರೀಕ್ಷಿಸುವುದು ಪ್ರತಿಯೊಂದು ಕ್ಷೇತ್ರದಲ್ಲೂ ಅಸ್ತಿತ್ವದಲ್ಲಿದೆ. ಮಹಿಳೆ ಏಕಾಂಗಿಯಾಗಿ ಯಾಕೆ ಈ ಕಷ್ಟಗಳನ್ನು ಎದುರಿಸಬೇಕು ಎಂದು ನಿರೀಕ್ಷಿಸಲಾಗಿದೆ? ಪುರುಷರು ಸಹ ಇದನ್ನು ಎದುರಿಸುತ್ತಾರೆಯಾದರೂ, ಮಹಿಳೆಯರು ಇದರ ಭಾರವನ್ನು ತುಸು ಹೆಚ್ಚೇ ಹೊರುತ್ತಾರೆ ”ಎಂದು ಅವರು ಹೇಳಿದರು. ಈ ವಿಚಾರವಾಗಿ ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಮಾತುಕತೆ ನಡೆಸಿರುವುದಾಗಿಯೂ ಖುಷ್ಬು ಹೇಳಿದ್ದಾರೆ. “ಸಂತ್ರಸ್ತರ ಬಗ್ಗೆ ಅವರ ಸಹಾನುಭೂತಿ ಮತ್ತು ತಿಳುವಳಿಕೆಯಿಂದ ಆಶ್ಚರ್ಯವಾಯಿತು. ಅವರು ಅವರನ್ನು ದೃಢವಾಗಿ ಬೆಂಬಲಿಸುತ್ತಾರೆ ಮತ್ತು ಈ ಸಮಯದಲ್ಲಿ ಅವರೊಂದಿಗೆ ನಿಲ್ಲುತ್ತಾರೆ. ನೀವು ಇಂದು ಅಥವಾ ನಾಳೆ ಮಾತನಾಡುತ್ತೀರಾ ಎಂಬುದು ಮುಖ್ಯವಲ್ಲ, ಮಾತನಾಡಿ. ತಕ್ಷಣವೇ ಮಾತನಾಡುವುದು ಗುಣಪಡಿಸಲು ಮತ್ತು ಹೆಚ್ಚು ಪರಿಣಾಮಕಾರಿಯಾಗಿ ತನಿಖೆ ಮಾಡಲು ಸಹಾಯ ಮಾಡುತ್ತದೆ ”ಎಂದು ಬಿಜೆಪಿ ನಾಯಕಿ ತಮ್ಮ ಪೋಸ್ಟ್ ನಲ್ಲಿ ಬರೆದಿದ್ದಾರೆ.