ಜೆಡಿಎಸ್ ಅಲ್ಪಸಂಖ್ಯಾತರ ರಾಜ್ಯ ಘಟಕದ ಕಾರ್ಯಾಧ್ಯಕ್ಷೆ ಎಂದು ಹೇಳಿ ಮಹಿಳೆಯೊಬ್ಬಳು ಎಂಟು ಜನರೊಂದಿಗೆ ಮದುವೆಯಾಗಿ ಬಹುಕೋಟಿ ರೂಪಾಯಿ ವಂಚನೆ ಮಾಡಿದ ಘಟನೆಯೊಂದು ಬಳ್ಳಾರಿಯಲ್ಲಿ ನಡೆದಿದೆ.
ಮೂಲತಃ ಉಡುಪಿ ನಿವಾಸಿಯಾಗಿರುವ ತಬುಸುಮ್ ತಾಜ್ (40) ಎಂಬ ಮಹಿಳೆಯೇ ಈ ಪ್ರಕರಣದ ಆರೋಪಿ. ಈಕೆ ಬರೋಬ್ಬರಿ 8 ಜನರೊಂದಿಗೆ ಸುಳ್ಳು ಹೇಳಿ ನಂಬಿಸಿ ಮದುವೆಯಾಗಿದ್ದಾಳೆ. ನಂತರ ಸಾಲ ಕೊಡಿಸೋದಾಗಿ ನಂಬಿಸಿ 38 ಕೋಟಿಯಷ್ಟು ಹಣವನ್ನು ವಂಚನೆ ಮಾಡಿದ್ದಾಳೆಂದು ವರದಿಯಾಗಿದೆ.
ಮಾತ್ರವಲ್ಲದೇ ಜೆಡಿಎಸ್ ರಾಜ್ಯ ಮೈನಾರಿಟಿ ಘಟಕದ ಕಾರ್ಯಾಧ್ಯಕ್ಷೆ ಜೊತೆಗೆ ಹೀನಾ ಎಂಟರ್‌ಪ್ರೈಸಸ್ ಎಂದು ರಾಜ್ಯದ ಹಲವೆಡೆ ಆಫೀಸ್ ಮಾಡಿಕೊಂಡಿದ್ದಳು ಈಕೆ.
ಮುದ್ರಾ ಲೋನ್, ಸರಕಾರಿ ಕೆಲಸ, ಮೈನಾರಿಟಿ ಲೋನ್, ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಹೀಗೆ ವಂಚನೆ ಮಾಡುವುದನ್ನೇ ಉದ್ಯೋಗ ಮಾಡಿಕೊಂಡಿದ್ದಳು ಈ ಆರೋಪಿ ಮಹಿಳೆ.
ಯುಟಿ ಖಾದರ್ ಬಳಿ ಬ್ಲ್ಯಾಕ್ ಮನಿ ಇದೆ. ಅದನ್ನು ವೈಟ್ ಮಾಡಲಿಕ್ಕೆ ಈ ಬ್ಯುಸಿನೆಸ್ ಮಾಡಿದ್ದೇನೆ ಎಂದ ಹೇಳಿ ಮುಗ್ಧರನ್ನು ನಂಬಿಸಿದ್ದಳು ಈ ಆರೋಪಿತ ಮಹಿಳೆ. ಒಂದು ಕೋಟಿ ಲೋನ್ ಬೇಕಾದರೆ 15 ಲಕ್ಷ ಕೊಟ್ರೆ ಸಾಕು. ಹತ್ತು ದಿನದಲ್ಲಿ ಮೈನಾರಿಟಿ ಲೋನ್ ಕೊಡುತ್ತೇನೆಂದು ಹೇಳಿ ವಂಚನೆ ಮಾಡುತ್ತಿದ್ದ ಈಕೆ ಸುಮಾರು 38 ಕೋಟಿ ರೂಪಾಯಿ ವಂಚಿಸಿರುವ ಕುರಿತು ವರದಿಯಾಗಿದೆ.