ಉಡುಪಿ - ತೀರಾ ಅಸ್ವಸ್ಥರಾದ ಹಿರಿಯ ವೃದ್ದರಾದ ನಂದಳಿಕೆ ಮೂಲದ ಕೃಷ್ಣ ಆಚಾರ್ಯ (87)ಇವರುರನ್ನು ವಿಶುಶೆಟ್ಟಿಯವರು ಜಿಲ್ಲಾಸ್ಪತ್ರೆಗೆ ದಾಖಲಿಸಿದ ಘಟನೆ ನಡೆದಿದೆ.
ಜೋರಾಗಿ ಮಳೆ ಗಾಳಿಗೆ ಅಪಾಯ ಸ್ಥಿತಿಯ ಮನೆಯಲ್ಲಿದ್ದ ಇವರನ್ನು ಕಾಪು ತಹಶಿಲ್ದಾರರು ಉದ್ಯಾವರದ ಆಶ್ರಮಕ್ಕೆ ಈ ಹಿಂದೆ ದಾಖಲಿಸಿದ್ದರು. ಈ ದಿನ ವೃದ್ದರು ತೀರಾ ಅಸ್ವಸ್ಥರಾಗಿ ಪ್ರಜ್ಞಾಹೀನರಾಗಿದ್ದು, ವಿಷಯ ತಿಳಿದ ವಿಶುಶೆಟ್ಟಿಯವರು ರಾಮದಾಸ್ ಪಾಲನ್ ರವರ ನೆರವಿನಿಂದ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ಸಂಬಂಧಿಕರು ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸುವಂತೆ ವಿಶುಶೆಟ್ಟಿಯವರು ವಿನಂತಿಸಿದ್ದಾರೆ.