Header Ads Widget

ಆನ್ಲೈನ್ ಆರೋಪಿಗಳು ಅಂದರ್

 


ಪಿರ್ಯಾದುದಾರಾದ ಉಪೇಂದ್ರಭಟ್‌ ರವರಿಗೆ ಅಪರಿಚಿತ ವ್ಯಕ್ತಿಗಳು ಕರೆ ಮಾಡಿ ವಾಟ್ಸಪ್ ನಲ್ಲಿ ಮೋತಿಲಾಲ್‌ ಒಸ್ವಾಲ್‌ ಪ್ರೈವೇಟ್ ವೆಲ್ತ್ ಮ್ಯಾನೇಜ್ ಮೆಂಟ್ ಗ್ರೂಪ್‌ಗೆ ಸೇರಿಸಿದ್ದು. ಪಿರ್ಯಾದಿದಾರಿಗೆ ಮೋತಿಲಾಲ್‌ ಒಸ್ವಾಲ್‌ ಪ್ರೈವೇಟ್ ವೆಲ್ತ್ ಮ್ಯಾನೇಜ್ ಮೆಂಟ್ ಗ್ರೂಪ್‌ ನ VIP-203-845 ಎಂಬ ಅಕೌಂಟ್‌ ನಂಬರನ್ನು ನೀಡಿರುತ್ತಾರೆ. ಹಾಗೂ ಮೊ.ನಂ 7842874635 ಮತ್ತು 6391854496 ನೇದರಿಂದ Whats App ನಲ್ಲಿ ಟ್ರೇಡಿಂಗ್ ಬಗ್ಗೆ ಹಾಗೂ ಲಾಭಾಂಶಗಳ ಬಗ್ಗೆ ಮಾಹಿತಿ ತಿಳಿಸಿ ಪಿರ್ಯಾದಿದಾರರನ್ನು ನಂಬಿಸಿ, ಹೆಚ್ಚಿನ ಲಾಭಾಂಶ ಪಡೆಯಬಹುದೆಂದು ಆಸೆ ತೋರಿಸಿ,ಒಟ್ಟು 33,10,000/- ಹಣವನ್ನು ಡಿಪಾಸಿಟ್ ಮಾಡಿಸಿಕೊಂಡಿರುತ್ತಾರೆ. ಈ ಬಗ್ಗೆ ಉಪೇಂದ್ರ ಭಟ್‌ ರವರು ನೀಡಿದ ದೂರಿನಂತೆ ಸೆನ್ ಪೊಲೀಸ್ ಠಾಣೆಯಲ್ಲಿ ಠಾಣಾ ಅ.ಕ್ರ 62/2024 ಕಲಂ: 66(C) 66(D) ಐ.ಟಿ. ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ. 

ಈ ಬಗ್ಗೆ ರಾಮಚಂದ್ರ ನಾಯಕ್‌ ಪಿ.ಐ CEN ಠಾಣೆ ರವರ ನೇತೃತ್ವದಲ್ಲಿ ಎ.ಎಸ್.ಐ ರಾಜೇಶ್ ಸಿಬ್ಬಂದಿಗಳಾದ ಹೆಚ್.ಸಿ ಪ್ರವೀಣ ಕುಮಾರ್, ಅರುಣ ಕುಮಾರ್, ವೆಂಕಟೇಶ್, ಯತೀನ್ ಕುಮಾರ್, ರಾಘುವೇಂದ್ರ, ಪ್ರಶಾಂತ್, ಪ್ರಸನ್ನ ಸಿ ಸಲ್ಯಾನ್ ರವರ ವಿಶೇಷ ತಂಡವನ್ನು ರಚಿಸಿ ಆರೋಪಿಗಳಾದ (1) ಮಹಮ್ಮದ್ ಮುಸ್ತಫಾ ಪಿ (36) ಕುರಿಯ ಗ್ರಾಮ, ಪುತ್ತೂರು ತಾಲೂಕು. 2) ಖಾಲಿದ್ದ್.‌ ಬಿ , (39), ಬೊಂಬ್ರಾಣ ಗ್ರಾಮ, ಕುಂಬ್ಳೆ , ಮಂಜೇಶ್ವರ ತಾಲೂಕು, ಕಾಸರಗೋಡು. 3) ಮೊಹಮ್ಮದ್‌ ಸಫಾನ್ ಕೆ.ಎ, (22), ಕನ್ಯಾಪಾಡಿ, ನೀರ್ಚಾಲ್‌ ಗ್ರಾಮ ಕಾಸರಗೋಡು 4) ಸತೀಶ್‌ ಶೇಟ್‌, (22), ಪ್ರಗತಿ ಬಿಜೈ, ಮಂಗಳೂರು ಎಂಬುವರನ್ನು ದಸ್ತಗಿರಿ ಮಾಡಿ ಅವರಿಂದ 5 ಮೊಬೈಲ್ ಪೋನ್ ಗಳನ್ನು ಹಾಗೂ ರೂ, 13,00,000/- ನಗದನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಸದ್ರಿ ಪ್ರಕ್ರರಣದ ಪ್ರಮುಖ ಸೂತ್ರದಾರಿಗಳು ತಲೆಮರೆಸಿ ಕೊಂಡಿದ್ದು ಅವರ ದಸ್ತಗಿರಿಗೆ ಬಾಕಿ ಇದ್ದು, ಪ್ರಕರಣ ತನಿಖೆಯಲ್ಲಿ ಇರುತ್ತದೆ.

ಸಾರ್ವಜನಿಕರು ಅನ್ ಲೈನ್ ನಲ್ಲಿ ಯಾವುದೇ ಆಮಿಷಗಳಿಗೆ ಒಳಗಾಗಿ ಹಣ ಹೂಡಿಕೆ ಮಾಡಬಾರದಾಗಿ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.