Header Ads Widget

ಅವಾರ್ಡ್ ಗಳ ಸರದಾರ ಆಸ್ಟ್ರೋಮೊಹನ್

 

ಉಡುಪಿ, ಆ.19: ಉತ್ತರ ಮೆಸೆದೋಣಿಯಾ ಫೋಟೋ ಆರ್ಟ್ ಗ್ರೂಪ್ ಆಯೋಜಿಸಿದ್ದ ಅಂತಾರಾಷ್ಟ್ರೀಯಮಟ್ಟದ ಛಾಯಾಗ್ರಹಣ ಸ್ಪರ್ಧೆ ಸಮ್ಮರ್ ಫೋಟೋ ಅವಾರ್ಡ್ಸ್ ನಲ್ಲಿ  ಹಿರಿಯ ಪತ್ರಿಕಾ ಛಾಯಾಗ್ರಾಹಕ ಆಸ್ಟ್ರೋ ಮೋಹನ್ ಅವರ ಎರೆಡು ಚಿತ್ರಗಳಿಗೆ ರಜತ ಮತ್ತು ಕಂಚು ಪ್ರಶಸ್ತಿ ಪ್ರಾಪ್ತವಾಗಿದೆ.

ಲೈಫ್ ವಿಭಾಗದಲ್ಲಿ ಸ್ಟಿಲ್ ಹ್ಯಾಪಿ ಚಿತ್ರಕ್ಕೆ ಐಎಎಪಿ ರಜತ ಹಾಗೂ ಚೈಲ್ಡ್ ವಿಭಾಗದಲ್ಲಿ ಬಿಫೋರ್ ಸ್ಕೂಲ್ ಸ್ಟಾರ್ಟ್ಸ್ ಚಿತ್ರಕ್ಕೆ ಕಂಚು ಪದಕ ಲಭಿಸಿದೆ.ಇದರೊಂದಿಗೆ ಇವರ 8 ಚಿತ್ರಗಳು ಅಕ್ಸೆಪ್ಟೆನ್ಸ್ ಪ್ರಶಸ್ತಿ ಪಡೆದಿವೆ.

ಕಳೆದ ಮೂರು ದಶಕಗಳಿಂದ ಛಾಯಾಚಿತ್ರ ಪತ್ರಿಕೋದ್ಯಮದಲ್ಲಿ ವ್ಯವಸಾಯ ಮಾಡುತ್ತಿರುವ ಆಸ್ಟ್ರೋ ಮೋಹನ್ ಮಣಿಪಾಲ ಉದಯವಾಣಿ ಆವೃತ್ತಿಯಲ್ಲಿ ಹಿರಿಯ ಪತ್ರಿಕಾ ಛಾಯಾಗ್ರಾಹಕರಾಗಿ ಸೇವೆಸಲ್ಲಿಸುತ್ತಿದ್ದಾರೆ.ಇಂದಿನವರೆಗೂ ಸುಮಾರು 750 ಕ್ಕೂ ಅಧಿಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ.