ಭಾರತೀಯ ಅಂಚೆ ಪುತ್ತೂರು ವಿಭಾಗ ಮತ್ತು ಆರ್ ಸಿ ಸಿ ಗುತ್ತಿಗೆದಾರರ ಸಂಘ ಕಾರ್ಕಳ ಇವರ ಸಹಯೋಗದೊಂದಿಗೆ ಬೃಹತ್ ಅಪಘಾತ ವಿಮೆ ಮೇಳವು ಕಾರ್ಕಳ ಜೋಡುರಸ್ತೆಯ ನವದುರ್ಗ ಕಟ್ಟಡದಲ್ಲಿ ನಡೆಯಿತು, ದೀಪ ಪ್ರಜ್ವಲನೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು ಮುಖ್ಯ ಅತಿಥಿಗಳಾಗಿ ಕಾರ್ಕಳ ಪ್ರಧಾನ ಅಂಚೆ ಕಛೇರಿಯ ಅಂಚೆಪಾಲಕರಾದಂತಹ ಮಂಜುನಾಥಎಚ್ ಉದ್ಯಮಿ ಸತ್ಯೇಂದ್ರ ಭಟ್,ಸಹಾಯಕ ಅಂಚೆ ಅಧೀಕ್ಷಕರಾಗಿರುವ ಮೋಹನ್ ಬಿ, ಹಿರಿಯ ಗುತ್ತಿಗೆದಾರ ಫೆಲಿಕ್ಸ ಮಾತಾಯಿಸ್, ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಹಮದ್ ಶರೀಫ್ ,ಆರ್‌ಸಿಸಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ದಾಮೋದರ ಆಚಾರ್ಯ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಮ್ಯಾನೇಜರ್ ಸಿಹಾಸ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಕಾರ್ಕಳ ಪ್ರಧಾನ ಅಂಚೆ ಕಚೇರಿಯ ಅಂಚೆಪಾಲಕರಾದ ಮಂಜುನಾಥ್ ಅಂಚೆ ಇಲಾಖೆ ಯೋಜನೆಗಳು ಮತ್ತು ಅಪಘಾತ ವಿಮೆಗಳ ಬಗ್ಗೆ ಸಾರ್ವಜನಿಕರಿಗೆ ಸಂಪೂರ್ಣ ಮಾಹಿತಿ ನೀಡಿದರು.
ಈ ವಿಮಾ ಮೇಳದಲ್ಲಿ ಸುಮಾರು 150ಕ್ಕೂ ಹೆಚ್ಚು ಜನ ವಿಮಾ ಪಾಲಿಸಿಯನ್ನು ಪಡೆದುಕೊಂಡರು.
ಮಾಸ್ಟರ್ ಸಮರ್ಥ ಪ್ರಾರ್ಥನೆಯನ್ನು ನೆರವೇರಿಸಿದರು.
ಕಾರ್ಯಕ್ರಮದ ನಿರೂಪಣೆ ಪ್ರಶಾಂತ್ ಆಚಾರ್ಯ ಜೋಗುಳಬೆಟ್ಟು ನೆರವೇರಿಸಿದರು.