ಮಹತೋಬಾರ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನ ಮತ್ತು ನೃತ್ಯನಿಕೇತನ ಕೊಡವೂರು ಸಂಯೋಜನೆಯ ಸಾಪ್ತಾಹಿಕ ನೃತ್ಯಸರಣಿ "ನೃತ್ಯಶಂಕರ" ಸರಣಿಯ 57ನೇ ಕಾರ್ಯಕ್ರಮದಲ್ಲಿ ಕು। ಸಿಂಚನಾ ಬಾಯರಿಯವರಿಂದ ಭರತನಾಟ್ಯವು ಕೊಡವೂರು ಶಂಕರನಾರಾಯಣ ದೇವಸ್ಥಾನದ ವಸಂತಮಂಟಪದಲ್ಲಿ ಜರಗಿತು.
ನೃತ್ಯನಿಕೇತನ ಕೊಡವೂರು ನೃತ್ಯ ಗುರುಗಳಾದ ಸುಧೀರ್ ಕೊಡವೂರು ಮತ್ತು ಮಾನಸಿ ಸುಧೀರ್ ರವರ ಶಿಷ್ಯೆಯಾಗಿರುವ ಸಿಂಚನಾ ಉಡುಪಿಯ ಖ್ಯಾತ ವೈದ್ಯ ಡಾ। ಟಿ.ಶ್ರೀಧರ ಬಾಯರಿ ಹಾಗು ಡಾ। ಅನುಪಮ ಬಾಯರಿ ದಂಪತಿಗಳ ಸುಪುತ್ರಿಯಾಗಿದ್ದಾಳೆ.