Header Ads Widget

ಸ್ವತ್ತು ಕಳವು ಪ್ರಕರಣದ ಆರೋಪಿಯ ಬಂಧನ



ದಿನಾಂಕ:07/08/2024 ರಂದು ಕಾರ್ತಿಕ್ ಕುಮಾರ್ (32), ತಂದೆ: ಮಹಾಬಲ,  ಹೆಬ್ರಿ ಗ್ರಾಮ,ಹೆಬ್ರಿ ತಾಲ್ಲೂಕು, ಎಂಬವರು ಮ್ಯಾನೇಜರ್ ಆಗಿ ಕೆಲಸವನ್ನು ಮಾಡಿಕೊಂಡಿರುವ  ಉಡುಪಿ ತಾಲ್ಲುಕು ಪುತ್ತೂರು ಗ್ರಾಮದ ಕರಾವಳಿ ಬೈಪಾಸ್ ಬಳಿ ಇರುವ EASY LIFE ಕೃಷಿ ಯಂತ್ರೋಪಕರಣಗಳ ಮಾರಾಟ ಸಂಸ್ಥೆಯಲ್ಲಿ ಚಾಲಕ ರಾಗಿರುವ ಯಲ್ಲಪ್ಪ ಬೋವಿರವರು ಸಂಸ್ಥೆಯ ಮಾಲಿಕತ್ವದ KA20 AC2377 ನೇ ಬಜಾಜ್ ಗೂಡ್ಸ್ ನಲ್ಲಿ ಅವರದೇ  ತೀರ್ಥಹಳ್ಳಿಯಲ್ಲಿರುವ ಇನ್ನೊಂದು EASY LIFE ಶಾಖೆಯಿಂದ a) Portable Gen Set No-2, b) Kisan Kraft hose No-25, c) Carbon Fiber Telescopic Pruner No-12 ,d) Interlock Dhoti Sickle No-10,  ನಾಲ್ಕು ಬಗೆಯ ಸಾಮಾಗ್ರಿ ಗಳನ್ನು ತುಂಬಿಕೊಂಡು ಉಡುಪಿಯಲ್ಲಿ ರುವ EASY LIFE ಸಂಸ್ಥೆಯ ಶಾಖೆಯ ಎದುರು ದಿನಾಂಕ: 04/08/2024 ರಂದು ರಾತ್ರಿ 8:15 ಗಂಟೆಗೆ  ನಿಲ್ಲಿಸಿದ್ದು, ಮರುದಿನ 05/08/2024 ರಂದು ಬೆಳಿಗ್ಗೆ 8:45 ಗಂಟೆಗೆ ಸಂಸ್ಥೆಯಲ್ಲಿ ಕೆಲಸ ಮಾಡುವ ಶ್ರೇಯಸ್ ರವರು  ಗೂಡ್ಸ್  ರಿಕ್ಷಾದಲ್ಲಿದ್ದ ವಸ್ತುಗಳನ್ನು ತೆಗೆಯುತ್ತಿದ್ದ ಸಮಯ ಅದರಲ್ಲಿದ್ದ 12-Carbon Flore Telescopic Pruner ಗಳನ್ನು ಯಾರೋ ಕಳ್ಳರು ಕಳವು ಮಾಡಿ ಕೊಂಡು ಹೋಗಿದ್ದು, ಕಳವಾದ ಸೊತ್ತುಗಳ ಒಟ್ಟು ಮೌಲ್ಯ 6 ಲಕ್ಷ ರೂಪಾಯಿಗಳು ಆಗಬಹುದು ಎಂಬುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯ ಅಪರಾಧ ಕ್ರಮಾಂಕ : 142-2024 ಕಲಂ. 303(2) BNS ರಂತೆ ಪ್ರಕರಣ ದಾಖಲಾಗಿರುತ್ತದೆ. 

ಪ್ರಕರಣದಲ್ಲಿ ಆರೋಪಿ ಮತ್ತು ಸೊತ್ತು ಪತ್ತೆಯ  ಬಗ್ಗೆ ಈರಣ್ಣ ಶಿರಗುಂಪಿ,  ಪಿ. ಎಸ್.‌ ಐ, ಉಡುಪಿ ನಗರ ಠಾಣೆ ಮತ್ತು ಸಿಬ್ಬಂದಿಯವರಾದ ಪಿ. ಸಿ ಆನಂದ, ಪಿ. ಸಿ  ಶಿವಕುಮಾರ್‌ರವರನ್ನು ವಿಶೇಷ ಕತವ್ಯದಲ್ಲಿ ನೇಮಿಸಿದಂತೆ  ಅವರು ಆರೋಪಿ ಯಲ್ಲಪ್ಪ ಮಲ್ಲಪ್ಪಬೋವಿ ,ಪ್ರಾಯ: 37ವರ್ಷ, ತಂದೆ:ದಿವಂಗತ ಮಲ್ಲಪ್ಪ, ಹಳದೂರು ಗ್ರಾಮ, ಗುಳೇದಗುಡ್ಡ ತಾಲೂಕು , ಬಾಗಲ ಕೋಟೆ ಜಿಲ್ಲೆ ಎಂಬಾತನನ್ನು ದಿನಾಂಕ:17/08/2024 ರಂದು ಪತ್ತೆ ಮಾಡಿ, ದಸ್ತಗಿರಿ ಮಾಡಿ ಆತನು ಕಳವು ಮಾಡಿ ಉಡುಪಿ ಆದಿ ಉಡುಪಿ ಎಪಿಎಂಸಿ. ಗೋಧಾಮು ಕಟ್ಟಡಗಳ ಸಂದಿನಲ್ಲಿ ಬಚ್ಚಿಟ್ಟಿದ್ದ ಈಸಿ ಲೈಫ್‌ ಎಂಟರ್‌ಪ್ರೈಸಸ್‌ ಗೆ ಸಂಬಂಧಿಸಿದ  ರೂಪಾಯಿ 6,00,000 ಮೌಲ್ಯದ Carbon Flore Telescopic Pruner ದೋಟಿಗಳು-12 ನ್ನು ಸ್ವಾಧೀನ ಪಡಿಸಿಕೊಳ್ಳಲಾಗಿರುತ್ತದೆ. 

ಪ್ರಕರಣದಲ್ಲಿ  ದಸ್ತಗಿರಿಯಾದ ಆರೋಪಿ ಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, ಜಿಲ್ಲಾ ಕಾರಾಗೃಹ, ಹಿರಿಯಡ್ಕದಲ್ಲಿ ನ್ಯಾಯಾಂಗ  ಬಂಧನ ದಲ್ಲಿರುತ್ತಾನೆ.