ಉಡುಪಿ : ಕಳೆದ ಕೆಲವು ದಿನಗಳ ಹಿಂದೆ ಉಡುಪಿ ರಥಬೀದಿಯಲ್ಲಿ ರಾತ್ರಿ ಹೊತ್ತು ಸಿಕ್ಕಿದ ವೃದ್ದೆಯನ್ನು ವಿಶು ಶೆಟ್ಟಿ ಸಖಿ ಸೆಂಟರ್ ಗೆ ದಾಖಲಿಸಿದ್ದು ಇದೀಗ ಅವರ ಸಂಬಂಧಿಕರ ಪತ್ತೆಯಾಗದ ಕಾರಣ ಸಖಿ ಕೇಂದ್ರದ ಸಿಬ್ಬಂದಿಗಳ ಸಹಕಾರದಿಂದ ಕಮಲ ಎಂಬ ಈ ವೃದ್ಧ ಮಹಿಳೆಯನ್ನು ಕಾರ್ಕಳ ಬೈಲೂರಿನ ಹೊಸಬೆಳಕು ಆಶ್ರಮಕ್ಕೆ ದಾಖಲಿಸಲಾಗಿದೆ. ಆಶ್ರಮದ ಮುಖ್ಯಸ್ಥರು ಮಾನವೀಯ ನೆಲೆಯಲ್ಲಿ ಮಹಿಳೆಗೆ ಆಶ್ರಯ ನೀಡುವ ಮುಖಾಂತರ ಸಹಕರಿಸಿದ್ದಾರೆ.