ಉಡುಪಿ :- ಸ್ವಾತಂತ್ರ್ಯೋತ್ಸವದ ಅಂಗವಾಗಿ ಮಿಷನ್ ಆಸ್ಪತ್ರೆಯ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ರಕ್ತದಾನ ಶಿಬಿರ ಆ.15ರಂದು ನೆರವೇರಿತು.
ಅತಿಥಿಗಳಾಗಿ ಕುಂದಾಪುರದ ರೆಡ್ ಕ್ರಾಸ್ ಸಂಸ್ಥೆಯ ನಿರ್ದೇಶಕರಾದ ಜಯಕರ್ ಶೆಟ್ಟಿ ಅಧ್ಯಕ್ಷತೆಯನ್ನು ಆಸ್ಪತ್ರೆಯ ನಿರ್ದೇಶಕರಾದ ಡಾ.ಸುಶೀಲ್ ಜತ್ತನ್ನ ವಹಿಸಿದರು.
ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಚಾಪ್ಲಿನ್ ರಾದ ರೆವೆರೆಂಡ್ ರೇಚಲ್ ಡಿಸಿಲ್ವಾ ಪ್ರಾರ್ಥನೆ ನೆರವೇರಿಸಿದರು.
ವೇದಿಕೆಯಲ್ಲಿ ಬ್ಲಡ್ ಹೆಲ್ತ್ ಕೇರ್ ಕರ್ನಾಟಕ ಅಧ್ಯಕ್ಷ ಶೇಖ್ ಪಾಯಸ್ ಆಲಿ ಮುನಾವರ್, ಆಜ್ಮಲ್ ಆಸಾದಿ ,ವೈದ್ಯಕೀಯ ಪ್ರತಿನಿಧಿಗಳ ಸಂಘದ ರಾಘವೇಂದ್ರ ಪ್ರಭು, ಕರ್ವಾಲ್, ಆಡಳಿತಾಧಿಕಾರಿ ದೀನಾ ಪ್ರಭಾವತಿ ಉಪಸ್ಥಿತರಿದ್ದರು. ಆಸ್ಪತ್ರೆಯ ಪಿ ಆರ್ ಓ ರೋಹಿ ರತ್ನಾಕರ್ ನಿರೂಪಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ. ರೋಶನ್ ಪಾಯಸ್ ವಂದಿಸಿದರು.
- ಡಾ. ಪೆರಲಾಯ ಸಹಕರಿಸಿದರು.