Header Ads Widget

ಉಡುಪಿ: ಸ್ವಾತಂತ್ರ ದಿನಾಚರಣೆಯ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ

 


ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಕರ್ನಾಟಕ ಕರ್ನಾಟಕ ಜಿಲ್ಲಾ ಸಂಸ್ಥೆ ಉಡುಪಿ. 15/08/24 ರಂದು ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಸ್ವಾತಂತ್ರ ದಿನಾಚರಣೆಯ ಪ್ರಯುಕ್ತ 75 ನೇ ತಿಂಗಳ ಸ್ವಚ್ಛತಾ ಕಾರ್ಯಕ್ರಮವು ನಡೆಸಲಾಯಿತು. ಈ ಕಾರ್ಯಕ್ರಮವು ರೈಲ್ವೆ ಆಫೀಸರ್ ಆಗಿರುವಂತಹ S. K. ಭಟ್ ಇವರ ನೇತೃತ್ವ ಹಾಗೂ ಸಂಪೂರ್ಣ ಸಹಕಾರದೊಂದಿಗೆ ನಡೆಯಿತು.

ಈ ಕಾರ್ಯಕ್ರಮದಲ್ಲಿ ಕರ್ಮೆಲ್ ಆಂಗ್ಲ ಮಾಧ್ಯಮ ಶಾಲೆಯ ಗೈಡ್ಸ್, ಮಹಿಳಾ ರೆಂಜಾರ್ಸ್ ಮುಕ್ತ ದಳ ರೋವರ್ ರೆಂಜಾರ್ಸ್ ವಿದ್ಯಾರ್ಥಿಗಳು,ಶಿಕ್ಷಕರು ಭಾಗವಹಿಸಿದ್ದರು. ಈ ಮಕ್ಕಳನ್ನು ಉರಿದುಂಬಿಸಿ.. ಅವರ ಧೇಯ ವಾಕ್ಯದಂತೆ ನಡೆದುಕೊಳ್ಳುವಂತೆ ಸಹಕರಿಸಿರುವ ಮುಖ್ಯೋಪಾಧ್ಯಾಯರಿಗೆ ಶಿಕ್ಷಕರಿಗೂ ರಾಜ್ಯ ಮುಖ್ಯ ಆಯುಕ್ತರು ಪರವಾಗಿ ಹಾಗೂ ಜಿಲ್ಲಾ ಮುಖ್ಯ ಆಯುಕ್ತರು ಧನ್ಯವಾದ ಸಲ್ಲಿಸಿದ್ದಾರೆ.