ಉದ್ಯಮಿಯಾದ ಮುಸ್ತಾಕ್ ಇಬ್ರಾಹೀಮ್ ರವರು ಈ ಅಂಗಡಿಯನ್ನು ಉದ್ಘಾಟನೆ ಮಾಡಿದರು.
ಸಮಾಜ ಸೇವಕ ಜಹೀರ್ ಅಹಮದ್ ರವರು ಜಮಾ ಆತೆ ಇಸ್ಲಾಮೀ ಹಿಂದ್ ರವರು ಈ ಅಂಗಡಿಯ ಸಂಪೂರ್ಣ ಖರ್ಚನ್ನು ಭರಿಸಿ, ವ್ಯವಸ್ಥೆ ಮಾಡಿ ಯುವಕನಿಗೆ ಕೊಡುಗೆಯಾಗಿ ಕೊಟ್ಟಿದ್ದು, ಇದನ್ನು ಸದುಪಯೋಗ ಪಡಿಸಿ ಕೊಳ್ಳಬೇಕೆಂದು ಶುಭ ಹಾರೈಸಿದರು.
ಬದರ್ ಜುಮ್ಮಾ ಮಸ್ಜಿದ್ ನ ಖತೀಬ್ ರಶೀದ್ ಸಖಾಫಿ ಯವರು ದುವಾ ಮಾಡಿದರು.
ಕಾಪು ಸ್ಥಾನೀಯ ಅಧ್ಯಕ್ಷರು ಅನ್ವರ್ ಅಲಿ ಯವರು ಬಂದ ಅತಿಥಿಗಳನ್ನು ಸ್ವಾಗತಿಸಿ, ಜಮಾ ಅತ್, ಸಮಾಜದಲ್ಲಿರುವ ಬಡ ಜನರನ್ನು ಗುರುತಿಸಿ,ಸ್ವಾವಲಂಬಿಯಾಗಿ ತಮ್ಮ ಬದುಕು ರೂಪಿಸಲು ಯೋಜನೆ ಹಾಕಿಕೊಂಡು ಅದರ ವ್ಯವಸ್ಥೆ ಮಾಡುತ್ತದೆ ಎಂದು ತಿಳಿಸುತ್ತಾ, ಕೊನೆಯಲ್ಲಿ ಧನ್ಯವಾದ ನೀಡಿದರು.