ಬ್ರಾಹ್ಮಣ ಮಹಾಸಭಾ ಕೊಡವೂರು ವತಿಯಿಂದ ದೀವಿಗೆ ಅಮಾವಾಸ್ಯೆಯ ಪ್ರಯುಕ್ತ ಸಾರ್ವಜನಿಕರಿಗೆ ಹಾಲೆ ಮರದ ತೊಗಟೆಯ ಔಷಧೀಯ ಕಷಾಯ ವಿತರಣೆ ಕಾರ್ಯಕ್ರಮವು ವಿಪ್ರಶ್ರೀ ಕಲಾಭವನಲ್ಲಿ ದಿನಾಂಕ 04-08-2024 ರಂದು ನಡೆಯಿತು. ಆಯುರ್ವೇದ ಹಾಗೂ ಪಂಚಕರ್ಮ ವೈದ್ಯರಾದ ಡಾ.ಸುದರ್ಶನ್ ಭಟ್ ಭಾಗವಹಿಸಿ ಆಟಿ ಅಮಾವಾಸ್ಯೆ ಯ ಬಗ್ಗೆ, ಹಾಲೆ ಮರದ ಔಷಧೀಯ ಗುಣಗಳ ಬಗ್ಗೆ ಮತ್ತು ಅದರ ಕಷಾಯ ಸೇವನೆಯ ವೈಜ್ಞಾನಿಕ ಹಿನ್ನಲೆ ಬಗ್ಗೆ ಮಾಹಿತಿ ನೀಡಿದರು.. ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಸುರೇಂದ್ರ ಉಪಾಧ್ಯಾಯ, ಕಾರ್ಯಾಧ್ಯಕ್ಷ ಶ್ರೀನಿವಾಸ ಉಪಾಧ್ಯಾಯ, ಕಾರ್ಯದರ್ಶಿ ಪ್ರವೀಣ್ ಬಲ್ಲಾಳ್, ಕೋಶಾಧಿಕಾರಿ ಚಂದ್ರಶೇಖರ್ ರಾವ್, ಧಾರ್ಮಿಕ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಭಟ್, ಸುಧೀರ್ ರಾವ್ ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಕೊಡವೂರು ಆಸುಪಾಸಿನ ಸುಮಾರು 500 ಕುಟುಂಬಗಳು ಜಾತಿ ಮತ ಬೇಧವಿಲ್ಲದೆ ಕಷಾಯವನ್ನು ಸ್ವೀಕರಿಸಿದರು.