ಉಡುಪಿಯ ಡಾ ಟಿಎಂಎ ಪೈ ಶಿಕ್ಷಣ ಕಾಲೇಜಿನಲ್ಲಿ ಬಿ.ಎಡ್ ವ್ಯಾಸಂಗ ಮಾಡಿ ಅದೇ ಕಾಲೇಜಿನಲ್ಲಿ ಒಟ್ಟು ನಲವತ್ತೈದು ವರ್ಷಗಳ ಕಾಲ ಗುಮಾಸ್ತರಾಗಿ, ಕಛೇರಿ ಮುಖ್ಯರಾಗಿ ಸೇವೆ ಸಲ್ಲಿಸಿದ ಶ್ರೀ ಜೆ ಸುದಾಮ ರಾವ್ ಅವರನ್ನು ಬೀಳ್ಕೊಡುವ ಸಮಾರಂಭ ಈಚೆಗೆ ನೆರವೇರಿತು. ಫಲಪುಷ್ಪಗಳನ್ನಿತ್ತು ಶಾಲು ಹೊದೆಸಿ ಅಭಿನಂದನ ಪತ್ರವನ್ನು ಅರ್ಪಿಸಿ ಶ್ರೀ ಯುತರನ್ನು ಗೌರವಿಸಲಾಯಿತು. ಶ್ರೀ ಮತಿ ಧನಲಕ್ಷ್ಮೀ, ಶ್ರೀ ರಾಜೇಂದ್ರ ಮತ್ತು ಶ್ರೀ ಶೇಖರ ಕುಲಾಲ್ ಅಭಿನಂದನೆಯ ಮಾತುಗಳನ್ನಾಡಿದರು. ಕಾಲೇಜಿನ ಸಮನ್ವಯಾಧಿಕಾರಿ ಡಾ ಮಹಾಬಲೇಶ್ವರ ರಾವ್ ಶ್ರೀ ಸುದಾಮ ರಾವ್ ಅವರ ನಿಷ್ಕಲಂಕ ಸೇವೆಯನ್ನು ಕೊಂಡಾಡಿ ಅವರ ಒಡನಾಟದ ಅನುಭವವನ್ನು ಸ್ಮರಿಸಿಕೊಂಡರು.
ಸನ್ಮಾನಿತರಾದ ಶ್ರೀ ಸುದಾಮ ರಾವ್ ಸಂಸ್ಥೆಯಲ್ಲಿ ತನಗೆ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ನೀಡಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.ಆರಂಭದಲ್ಲಿ ಶ್ರೀ ಮತಿ ರೂಪ.ಕೆ ಸ್ವಾಗತ ಕೋರಿದರು.ಶ್ರೀ ಮತಿ ಉಷಾ.ಎಚ್ ಅಭಿನಂದನ ಪತ್ರ ವಾಚಿಸಿದರು.ಶ್ರೀ ಮತಿ ಪ್ರೀತಿ ಎಸ್.ರಾವ್ ಧನ್ಯವಾದ ಸಮರ್ಪಿಸಿದರು.ಶ್ರೀ ಮತಿ ಮಮತಾ ಸಾಮಂತ್ ಕಾರ್ಯಕ್ರಮ ನಿರ್ವಹಣೆ ಮಾಡಿದರು.