Header Ads Widget

ದೇವರ ಭಾವಚಿತ್ರಗಳಲ್ಲಿ ಸೀರೆ ಹೊರತು ಬೇರೆ ಉಡುಪು ಧರಿಸಿದ ಚಿತ್ರಗಳಿಲ್ಲ~  ಪುತ್ತಿಗೆಶ್ರೀ

 


ಉಡುಪಿ, ಆ 4: ಮಹಿಳೆಯ ಸೀರೆಯುಟ್ಟರೆ ದೇವತೆಯಂತೆ ಕಾಣುವುದಲ್ಲದೆ, ನೋಡುಗರಿಗೆ ಪೂಜನೀಯ ಮೂಡುತ್ತದೆ. ದೇವರ ಭಾವಚಿತ್ರಗಳಲ್ಲಿ ಸೀರೆ ಹೊರತು ಬೇರೆ ಉಡುಪು ಧರಿಸಿದ ಚಿತ್ರಗಳಿಲ್ಲ. ಪ್ರಸ್ತುತ ಎಲ್ಲ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಪ್ರಾರಂಭ ಸಲಾಗಿದ್ದು, ಇದು ಮುಂದಿನ ದಿನಗಳಲ್ಲಿ ಸೀರೆ ಸಹಿತ ಸಾಂಪ್ರದಾಯಿಕ ಉಡುಪುಗಳಿಗೆ ಸಾಕಷ್ಟು ಬೇಡಿಕೆ ತಂದು ಕೊಡುತ್ತದೆ ಎಂದು ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ನುಡಿದರು. ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣಮಠದ ಭಾವನೆ

ಆಶ್ರಯದಲ್ಲಿ ಪದ್ಮಶಾಲಿ ನೇಕಾರ ಪ್ರತಿಷ್ಠಾನ, ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದ ಆಯೋಜನೆಯಲ್ಲಿ ರಾಜಾಂಗಣದಲ್ಲಿ ರವಿವಾರ ನಡೆದ ಕೈಮಗ್ಗ ಸೀರೆಗಳ ಉತ್ಸವವನ್ನು ಶ್ರೀಪಾದರು ಉದ್ಘಾಟಿಸಿ ಆಶೀರ್ವಚನ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಯಶ್ಪಾಲ್ ಎ. ಸುವರ್ಣ ಮಾತನಾಡಿ, ವೃತ್ತಿಯಾ ಧಾರಿತ ಸಮುದಾಯಗಳು ಸಾಕಷ್ಟಿರುವ ಕರಾವಳಿಯಲ್ಲಿ ಹಿಂದೆ ಅವರವರ ವೃತ್ತಿಗೆ ಸಾಕಷ್ಟು ಸಹಕಾರ ಪ್ರೋತ್ಸಾಹ ದೊರಕುತ್ತಿತ್ತು.

 ಹಿಂದಿನ ಆಚಾರ-ವಿಚಾರ, ಸಂಸ್ಕಾರ- ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಸಂಘ-ಸಂಸ್ಥೆಗಳು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಉಡುಪಿ ಸೀರೆಗೆ ಸಾಕಷ್ಟು ಪ್ರೋತ್ಸಾಹ ನೀಡುತ್ತಿರುವುದನ್ನು ಸರಿಸಿದರು. ಅದಾನಿ ಸಮೂಹ ಸಂಸ್ಥೆಯ ಅಧ್ಯಕ್ಷ ಕಿಶೋರ್ ಆಳ್ವ ನಬಾರ್ಡ್ ಸಂಸ್ಥೆಯ ಡಿಡಿಎಂ ಸಂಗೀತಾ ಕರ್ತಾ, ಪ್ರಸಾದ್ ನೇತ್ರಾಲಯದ ವೈದ್ಯಕೀಯ ನಿರ್ದೇಶಕ ಡಾ| ಕೃಷ್ಣಪ್ರಸಾದ್ ಕೂಡ್ಲು, ಉದ್ಯಮಿ ಇನ್ನ ಉದಯ ಕುಮಾರ್ ಶೆಟ್ಟಿ ಮಂಗಳೂರು ಪ್ರಾ.ನೇ.ಸೇಸ ಸಂಘದ ಅಧ್ಯಕ್ಷ ಲಕ್ಷ್ಮಣ್ ಕೊಡಿಯಾಲ್ ಬೈಲ್ ಮಾತನಾಡಿದರು. ಕಿಶೋರ್ ಆಳ್ವ ಯಶ್ಪಾಲ್ ಎ. ಸುವರ್ಣ, ಸಂಗೀತಾ ಕರ್ತಾ, ರಾಘವೇಂದ್ರ ಕಾಮತ್ ಉಪಸ್ಥಿತರಿದ್ದರು.  ಈ ಸಂದರ್ಭದಲ್ಲಿ ಲಕ್ಷ್ಮೀ ಶೆಟ್ಟಿ ಹಾಗು  ಬಿ. ಜಯಕರ ಶೆಟ್ಟಿ ಇಂದ್ರಾಳಿ ಅವರನ್ನು ಸಮ್ಮಾನಿಸಲಾಯಿತು.

ಮಣಿಪಾಲ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ। ಅವಿನಾಶ್ ಶೆಟ್ಟಿ, ಉಡುಪಿ ಡಾ|ಟಿಎಂಎ ಪೈ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ। ಶಶಿಕಿರಣ್ ಉಮಾಕಾಂತ್, ಕೆಎಂಸಿ ಡೀನ್ ಡಾ। ಪದ್ಮರಾಜ್ ಹೆಗ್ಡೆ,  ರೋಬೊಸಾಫ್ಟ್ ಸೀನಿಯರ್ ಪ್ರೊಜೆಕ್ಟ್ ಮ್ಯಾನೇಜರ್ ರಾಘವೇಂದ್ರ ಕಾಮತ್, ಅಲೆವೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಶ್ರೀಕಾಂತ್ ನಾಯಕ್, ನಗರಸಭೆ ಸದಸ್ಯರಾದ ಡಿ. ಬಾಲಕೃಷ್ಣ ಶೆಟ್ಟಿ, ಮಾನಸಾ ಸಿ. ಪೈ, ವಿಜಯಲಕ್ಷ್ಮೀ, ಉತ್ಸವ ಆಯೋಜನಾ ಸಮಿತಿ ಪ್ರಧಾನ ಕಾವ್ಯದರ್ಶಿ ಅವಿನಾಶ್ ಶೆಟ್ಟಿಗಾರ್ ಮಾರ್ಪಳ್ಳಿ, ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದ ಸಿಇಒ ದಿನೇಶ್ ಕುಮಾರ್, ಗಣ್ಯರು ಉಪಸ್ಥಿತರಿದ್ದರು.

 
ಉತ್ಸವ ಆಯೋಜನಾ ಸಮಿತಿ ಅಧ್ಯಕ್ಷ ಡಾ| ಚಂದನ್ ಶೆಟ್ಟಿಗಾರ್ ಸ್ವಾಗತಿಸಿದರು. ಕಾರ್ಯಾಧ್ಯಕ್ಷ ಮಂಜುನಾಥ್ ಮಣಿಪಾಲ ಪ್ರಸ್ತಾವನೆಗೈದರು. ಪದ್ಮಶಾಲಿ ನೇಕಾರ ಪ್ರತಿಷ್ಠಾನದ ಅಧ್ಯಕ್ಷ ರತ್ನಾಕರ ಇಂದ್ರಾಳಿ ಪರಿಚಯಿಸಿ, ಕಾರ್ಯದರ್ಶಿ ನರೇಂದ್ರ ಶೆಟ್ಟಿಗಾರ್ ಹೆರ್ಗ ವಂದಿಸಿದರು. ಉಪನ್ಯಾಸಕ ಶಿವಪ್ರಸಾದ್ ನಿರೂಪಿಸಿದರು. ಮಧ್ಯಾನ್ಹ ಗಂಟೆ 2.00 ರಿಂದ ಕೈಮಗ್ಗ ಸೀರೆ  ಧರಿಸಿ ಶ್ರೀಕೃಷ್ಣ ಲೀಲೋತ್ಸವ ಸಾಂಸ್ಕೃತಿಕ ನೃತ್ಯ ಸ್ಪರ್ಧೆ ನಡೆಯಿತು.
ಚಿತ್ರ: ಅನಿಶ್ ಶೆಟ್ಟಿಗಾರ್