ಉಡುಪಿ ನಗರದಲ್ಲಿ ಹಾಡಹಗಲೇ ಜೋಡಿಯೊಂದು ಕಾರಿನೊಳಗೆ ಅನೈತಿಕ ಚಟುವಟಿಕೆ ನಡೆಸುತ್ತಿದ್ದು, ನಂತರ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದ ಬಳಿಕ ಸ್ಥಳದಿಂದ ಪರಾರಿಯಾದ ಘಟನೆಯೊಂದು ಆಗಸ್ಟ್ 7 ರಂದು ನಡೆದಿದೆ.
ಕವಿ ಮುದ್ದಣ್ಣ ಮಾರ್ಗದಿಂದ ಚಿತ್ತರಂಜನ್ ಸರ್ಕಲ್ ಸಂಪರ್ಕಿಸುವ ರಸ್ತೆಯ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಎದುರು ಕಾರೊಂದು ನಿಂತಿದ್ದು, ಹಾಡಹಗಲೇ ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಯುವಕ, ಯುವತಿಯ ಜೋಡಿ ಪತ್ತೆಯಾಗಿದ್ದು, ನಂತರ ಕಾರನ್ನು ಸ್ಥಳದಲ್ಲೇ ಬಿಟ್ಟು ಜೋಡಿ ಪರಾರಿಯಾಗಿದ್ದಾರೆ.
ಕಾರಿನ ಗಾಜಿಗೆ ಒಳಭಾಗದಿಂದ ಕಪ್ಪು ಬಣ್ಣದ ಪರದೆ ಹಾಕಿದ್ದು, ಕಾರಿನ ಅಲುಗಾಟ ಕಂಡು ಸಂಶಯಗೊಂಡ ಸ್ಥಳೀಯರು ಇಣುಕಿ ನೋಡಿದಾಗ ಕೃತ್ಯ ಬೆಳಕಿಗೆ ಬಂದಿದೆ. ಕಾರು ಕಳೆದ ಒಂದು ವಾರದಿಂದ ಇಲ್ಲಿ ನಿಲ್ಲುತ್ತಿತ್ತು ಎಂದು ವರದಿಯಾಗಿದೆ.