ಆನೆಗುಂದಿ ಶ್ರೀ ಸರಸ್ವತಿ ಪೀಠ ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಹೈಸ್ಕೂಲ್ ಕುತ್ಯಾರು ಇಲ್ಲಿ ಶಾಲಾ ಮಂತ್ರಿ ಮಂಡಲ ಹಾಗೂ ವಿವಿಧ ಕ್ಲಬ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ನಡೆಯಿತು. ವಿವಿಧ ಸಂಘ ಸಂಸ್ಥೆಗಳ ಉದ್ಘಾಟನೆಯನ್ನು ಶ್ರೀ ಯಜ್ನೇಶ್ ಆಚಾರ್ಯ ರವರು ನೆರವೇರಿಸಿ ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಸಿಕೊಳ್ಳಲು ವಿವಿಧ ಸಂಘ ಸಂಸ್ಥೆಗಳು ಅಗತ್ಯ ಎಂದು ಹಾರೈಕೆಯ ಮಾತುಗಳನ್ನು ಆಡಿದರು. ಮಂತ್ರಿ ಮಂಡಲದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸಹಶಿಕ್ಷಕಿ ಪ್ರತಿಮಾ ರವರು ಪ್ರತಿಜ್ಞಾ ವಿಧಿ ಬೋಧಿಸಿದರು. ಶಾಲೆಯಲ್ಲಿ ನಡೆಯುವ ವಿವಿಧ ಚಟುವಟಿಕೆಗಳ ಬಗ್ಗೆ ಶ್ರೀಮತಿ ಸೌಮ್ಯ ಯೋಗೀಶ್ ರವರು ಸಂಕ್ಷಿಪ್ತ ಮಾಹಿತಿ ನೀಡಿದರು. ಕ್ಲಬ್ ಚಟುವಟಿಕೆಗಳ ಬಗ್ಗೆ ಸಹಶಿಕ್ಷಕಿ ಶ್ರೀಮತಿ ವಾಣಿ ಸಂತೋಷ್ ರವರು ತಿಳಿಸಿದರು. Rapid institute of abacus and Vedic maths ನ ಶಿಕ್ಷಕರಾದ ಶ್ರೀನಾಥ್ ಇವರು ಅಬಾಕಸ್ ಹಾಗೂ ವೇದಗಣಿತದ ಮಹತ್ತ್ವದ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಅಸೆಟ್ ನ ಉಪಾಧ್ಯಕ್ಷರು ಶ್ರೀ ವಿವೇಕ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಶ್ರೀ ಗುರುರಾಜ್ ಆಚಾರ್ಯ, ಸದಸ್ಯರುಗಳಾದ ಶ್ರೀ ಜನಾರ್ಧನ ಆಚಾರ್ಯ ಬಜಕೂಡ್ಲು, ಜಿ.ಟಿ.ಆಚಾರ್ಯ ಮುಂಬೈ, ಅರುಣ್ ಆಚಾರ್ಯ, ಶೈಕ್ಷಣಿಕ ಸಲಹೆಗಾರರಾದ ಶ್ರೀ ದಿವಾಕರ ಆಚಾರ್ಯ, ಪೋಷಕರು, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಾಂಶುಪಾಲರಾದ ಶ್ರೀಮತಿ ಸಂಗೀತಾ ಸ್ವಾಗತಿಸಿದರು. ಶ್ರೀಮತಿ ರಮ್ಯಾ ಪ್ರಭು ನಿರೂಪಿಸಿ, ಶ್ರೀಮತಿ ನಮಿತಾ ವಂದಿಸಿದರು.