ಮಹಾತ್ಮ ಗಾಂಧಿ ಪ್ರೌಢಶಾಲೆ ಸಾಹೇಬರಕಟ್ಟೆ ಇದರ ಆಶ್ರಯದಲ್ಲಿ, ಸಂಸ್ಥೆಯ ದತ್ತು ಸ್ವೀಕಾರ ಪಡೆದುಕೊಂಡ ಲಯನ್ಸ್ ಕ್ಲಬ್ ಬ್ರಹ್ಮಾವರ ಬಾರ್ಕೂರು ಇದರ ಸಹಯೋಗದೊಂದಿಗೆ 78ನೆಯ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಸಮಾರಂಭವು ವಿದ್ಯುಕ್ತವಾಗಿ ನಡೆಯಲ್ಪಟ್ಟಿತು. ಧ್ವಜಾರೋಹಣವನ್ನು ಲಯನ್ಸ್ ಕ್ಲಬ್ ಬ್ರಹ್ಮಾವರ - ಬಾರ್ಕೂರು ಇದರ ಅಧ್ಯಕ್ಷ ಲಯನ್ ಜಯರಾಮ ನಾಯಕ್ ನಡೆಸಿ
"ನಾವಿಂದು ಪಡೆದುಕೊಂಡ ಸ್ವಾತಂತ್ರ್ಯದ ಹಿನ್ನಲೆಯಲ್ಲಿ ಹಲವಾರು ಜನರ ತ್ಯಾಗವಿದೆ, ಬಲಿದಾನವಿದೆ, ನೆರವು ಪರಿಶ್ರಮವಿದೆ. ಹಿರಿಯರು ಅನುಸರಿಸಿಕೊಂಡು ಬಂದಂತಹ ಮೌಲ್ಯಗಳನ್ನು ಅನುದಿನವು ಅನು ಕ್ಷಣವು ಅನುರಣಿಸಬೇಕಾದಂತಹ ಅಗತ್ಯತೆ ನಮ್ಮ ಮುಂದಿದೆ" ಎಂದು ಹಾರೈಸಿದರು. ಸಮಾರಂಭದಲ್ಲಿ ಲಯನ್ಸ್ ಸಂಸ್ಥೆ ಬ್ರಹ್ಮಾವರ ಬಾರ್ಕೂರು ಇದರ ಉಪಾಧ್ಯಕ್ಷ ಲಯನ್ ಸುದೇಶ ಹೆಗ್ಡೆ, ಕಾರ್ಯದರ್ಶಿ ಐವನ್ ದೊನಾಥ್ ಸುವಾರಿಸ್, ಖಜಾಂಜಿ ಲಯನ್ ಸಂತೋಷ್ ಕೋಟ್ಯಾನ್, ಲಯನ್ ಆನಂದ್ ಶೆಟ್ಟಿ , ಲಯನ್ ಶೇಖರ್ ಶೆಟ್ಟಿ, ಲಯನ್ ಜಯರಾಮ ಹೆಗ್ಡೆ, ಲಯನ್ ಆನಂದ ಗಾಣಿಗ, ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರವೀಂದ್ರನಾಥ್ ಶೆಟ್ಟಿ ಕೊಳ್ಕೆಬೈಲು, ಕಾರ್ಯದರ್ಶಿ ಪ್ರಸಾದ್ ಶೆಟ್ಟಿ ಕೊಳ್ಕೆಬೈಲ್, ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಸಂಸ್ಥೆಯ ಮುಖ್ಯ ಶಿಕ್ಷಕ ಸತೀಶ್ ನಾಯಕ್ ಸ್ವಾಗತಿಸಿ ಸಹ ಶಿಕ್ಷಕಿ ಯಶೋದ ವಂದಿಸಿದರು ದೈಹಿಕ ಶಿಕ್ಷಣ ಶಿಕ್ಷಕ ವಿಜಯ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಅಭ್ಯಾಗತರ ಸಮ್ಮುಖದಲ್ಲಿ ನಡೆಸಿದ ವಿದ್ಯಾರ್ಥಿಗಳ ಪಿರಮಿಡ್ ರಚನೆ, ಸಮಾರಂಭದ ಆಕರ್ಷಣೆಯಾಗಿತ್ತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.