ಪೊಲೀಸ್ ಇಲಾಖೆಯಲ್ಲಿ ಸಾಹಸ ಪ್ರವೃತ್ತಿ, ಛಲ, ನಿಷ್ಠೆ ಮತ್ತು ಪ್ರಾಮಾಣಿಕತೆಗೆ ಇನ್ನೊಂದು ಹೆಸರು ಇನ್ ಸ್ಪೆಕ್ಟರ್ ಮಧು ಬಿ.ಇ. ಕಳ್ಳ ಕಾಕರು, ರೌಡಿಗಳಿಗೆ ಸಿಂಹ ಸ್ವಪ್ನವಾಗಿರುವ ಈ ಕೆಚ್ಚೆದೆಯ ತರುಣ ಅಧಿಕಾರಿಗೆ ಈಬಾರಿ 2023ನೇ ಸಾಲಿನ ಮುಖ್ಯಮಂತ್ರಿ ಪದಕ ಪಡೆದು ನಮ್ಮ ಉಡುಪಿ ಜಿಲ್ಲೆಯ ಗೌರವಕ್ಕೆ ಪಾತ್ರರಾಗಿದ್ದಾರೆ.
ಪ್ರಸ್ತುತ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿ ಕರ್ತವ್ಯ ನಿರ್ವಾಹಿಸುತ್ತಿರುವ ಮಧು ರವರು ನನ್ನ ಅಚ್ಚುಮೆಚ್ಚಿನ ಒಡನಾಡಿ. ಈ ಹಿಂದೆ ಮಲ್ಪೆಯ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ ಸ್ಪೆಕ್ಟರ್ ಆಗಿದ್ದಾಗ " ನನ್ನ ಹೋರಾಟ ಜೀವನದ ಊದ್ದಕ್ಕೂ ಬೆಂಗಾವಲಾಗಿ ನಿಂತು ಎಲ್ಲಾ ರೀತಿಯಲ್ಲಿ ಸಹಕರಿಸುತ್ತಿದ್ದರು.
ಹಿರಿಯ ಹೋರಾಟಗಾರ ದಿವಂಗತ ಸುಂದರ್ ಕಪ್ಪೆಟ್ಟುರವರು ತಮ್ಮ ಹುಟ್ಟೂರಿನ ಕಪ್ಪೆಟ್ಟುವಿನಲ್ಲಿ ಅಂಬೇಡ್ಕರ್ ಭವನದ ಜೊತೆಗೆ ಭಜನಾ ಮಂದಿರ ನಿರ್ವಿಸಲು ಹೊರಟಾಗ ಉಂಟಾದ ವಿವಾದದಲ್ಲಿ ಸುಂದರ್ ಕಪ್ಪೆಟ್ಟುರವರ ಮೇಲೆ ಸ್ಥಳೀಯ ಮಹಿಳೆಯರು ಅತ್ಯಾಚಾರ, ದಬ್ಬಾಳಿಕೆ, ಹಲ್ಲೆ, ದೌರ್ಜನ್ಯ ಮುಂತ್ತಾದ ಸುಳ್ಳು ದೂರು ನೀಡಿದಾಗ ಈ ದೂರಿನ ವಿರುದ್ಧ ಸತತವಾಗಿ ಸ್ಪಂದಿಸಿದ ಸಬ್ ಇನ್ ಸ್ಪೆಕ್ಟರ್ ಮಧುರವರು ಸುಂದರ್ ಕಪ್ಪೆಟ್ಟುರವರ ಮೇಲೆ ಸುಳ್ಳು ದೂರು ನೀಡಿದವರ ವಿರುದ್ಧ ಎಚ್ಚರಿಕೆ ನೀಡಿ ಅಂಬೇಡ್ಕರ್ ಭವನದೊಳಗೆ ಭಜನಾ ಮಂದಿರ ನಿರ್ವಿಸಿದ ವಿವಾದದ ಊದ್ದಕ್ಕೂ ನ್ಯಾಯದ ಪರವಾಗಿ ನನ್ನ ಜೊತೆ ನಿಂತು ಸೌಹಾರ್ದ ವಾಗಿ ಸಮಸ್ಯೆ ಪರಿಹಾರವಾಗುವವರೆಗೂ ನನ್ನ ಜೊತೆ ಸಹಕರಿಸಿದ್ದರು.
ಬಳಿಕ ಕಾರ್ಕಳ, ಕೋಟಾ ಠಾಣೆಗೆ ವರ್ಗಾವಣೆಯಾದರೂ ನಿರಂತರ ಸಂಪರ್ಕದಲ್ಲಿ ಇದ್ದರು. ನಮ್ಮ ಈ ಕೆಚ್ಚೆದೆಯ ಧೈರ್ಯವಂತ ತರುಣ ಸಬ್ ಇನ್ ಸ್ಪೆಕ್ಟರ್ ಮಧು, ಆದರ್ಶವಾದಿ. ಕಳ್ಳಕಾಕರ ಮನಕರಗಿಸುವಲ್ಲಿ ಇವರ ಪ್ರಯತ್ನ ಅವಿರತ. ಬೇರೆಯಾದ ಪತಿ-ಪತ್ನಿಯರನ್ನು ಒಂದುಗೂಡಿಸುವುದು, ಪ್ರೀತಿಸಿ ಬಂದವರಿಗೆ ಮದುವೆ ಮಾಡಿಸುವುದು, ಒಂದೇ ಎರಡೇ..
ಒಂದು ಕಾಲದಲ್ಲಿ ಕುಖ್ಯಾತ ರೌಡಿಯಾಗಿದ್ದವ ಇವರ ಬುದ್ದಿ ಮಾತು ಕೇಳಿ ಪರಿವರ್ತನಾಗಿ ಅಟೋಡ್ರೈವರ್ ಕೆಲಸ ಮಾಡುತ್ತಾ ನೆಮ್ಮದಿಯಿಂದ ಬದುಕು ನಡೆಸುತ್ತಿದ್ದಾನೆ. ತಮ್ಮ ಪ್ರಮಾಣಿಕತೆಗೆ ಮತ್ತು ನಿಷ್ಠೆಗೆ ಮುಖ್ಯಮಂತ್ರಿ ಪದಕ ಪಡೆದಿರುವುದು ತುಂಬಾನೆ ಖುಷಿ. ನುಡಿ ನಮನಗಳ ಮೂಲಕ ನಿಮ್ಮನ್ನು ಅಭಿನಂದಿಸುತ್ತೇನೆ. ಮುಂದೆ ಎರಡನೇ ಸಾಂಗ್ಲಿಯಾನರಾಗಿ ಪೊಲೀಸ್ ಇಲಾಖೆಗೆ ಸ್ಪೂರ್ತಿಯಾಗಿ ಎಂದು ಹಾರೈಸುವೆ.~ ಜಯನ್ ಮಲ್ಪೆ