Header Ads Widget

 


ಯುತಿಯೊಬ್ಬರು ತನ್ನ ಮಗನೊಂದಿಗೆ ನಾಪತ್ತೆಯಾಗಿರುವ ಘಟನೆ ಕಾಪು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಲ್ಲಾರು ಪಕೀರಣಕಟ್ಟೆಯಲ್ಲಿ ವಾಸವಾಗಿದ್ದ ನಸೀದಾ (27) ತನ್ನ ಎರಡು ವರ್ಷ ಪ್ರಾಯದ ಮಗಳೊಂದಿಗೆ ನಾಪತ್ತೆಯಾಗಿರುವುದಾಗಿ ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಸೀದಾ ಅವರಿಗೆ ವಿಚ್ಛೇದನವಾಗಿದ್ದು, ಕಳೆದೊಂದು ವರ್ಷದಿಂದ ಮಗಳೊಂದಿಗೆ ವಾಸವಿದ್ದರು.

ಇಪ್ಪತ್ತು ದಿನಗಳಿಂದ ತನ್ನ ಕುಟುಂಬದೊಂದಿಗೆ ಪಕೀರಣಕಟ್ಟೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು ಎಂದು ಹೇಳಲಾಗಿದೆ. ಆ.4 ರಂದು ಬೆಳಗ್ಗೆ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ಮನೆಯಲ್ಲಿದ್ದ ಚಿನ್ನ, ಹಣ ಮತ್ತು ಮೊಬೈಲ್‌ ಅನ್ನು ತೆಗೆದುಕೊಂಡು ತನ್ನ ಮಗಳನ್ನು ಕರೆದುಕೊಂಡು ನಾಪತ್ತೆಯಾಗಿದ್ದಾರೆ.

ಮಹಿಳೆಯ ಮೊಬೈಲ್‌ ಸ್ವಿಚ್‌ ಆಫ್‌ ಆಗಿದೆ ಎಂದು ಆಕೆಯ ತಾಯಿ ಕಾಪು ಪೊಲೀಸ್‌ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.