Header Ads Widget

ಕೊಡವೂರು ಬ್ರಾಹ್ಮಣ ಮಹಾಸಭಾ ವರಮಹಾಲಕ್ಷ್ಮೀ ಪೂಜೆ 

 


ಬ್ರಾಹ್ಮಣ ಮಹಾಸಭಾ ಕೊಡವೂರು ವತಿಯಿಂದ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ ವಿಪ್ರಶ್ರೀ ಕಲಾಭವನದಲ್ಲಿ ವೇದಮೂರ್ತಿ ಕಂಬಳಕಟ್ಟ ರಾಧಾಕೃಷ್ಣ ಉಪಾಧ್ಯಾಯರ ನೇತೃತ್ವದಲ್ಲಿ ಹಾಗೂ ಸುರೇಂದ್ರ ಉಪಾಧ್ಯಾಯ ಕಂಬಳಕಟ್ಟ ಮತ್ತು ಶಿವರಾಜ ಉಪಾಧ್ಯಾಯ ಇವರ ಪೌರೋಹಿತ್ಯದಲ್ಲಿ ಹಾಗೂ ಧಾರ್ಮಿಕ ಕಾರ್ಯದರ್ಶಿ  ಲಕ್ಷ್ಮೀ ನಾರಾಯಣ ಭಟ್ ಇವರ ಸಂಚಾಲಕತ್ವದಲ್ಲಿ ನಡೆಯಿತು.

ಶಿವರಾಜ ಉಪಾಧ್ಯಾಯರು ವರಲಕ್ಷ್ಮಿ ವೃತದ ಆಚರಣೆಯ ಬಗ್ಗೆ ಮತ್ತು ಅದರ ಮಹತ್ವದ ಬಗ್ಗೆ ಸಂಕ್ಷಿಪ್ತವಾಗಿ ನೆರೆದಿದ್ದ ಭಕ್ತರಿಗೆ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ವಿಪ್ರ ಮಹಿಳಾ ಬಳಗದಿಂದ ಭಜನೆ ಹಾಗೂ ಲಕ್ಷ್ಮೀಶೋಭಾನೆ ನಡೆಯಿತು. ಬ್ರಾಹ್ಮಣ ಮಹಾಸಭಾದ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.