Header Ads Widget

ಕೊಡವೂರು : ಉಚಿತ ಆರೋಗ್ಯ ತಪಾಸಣಾ ಹಾಗೂ ಚಿಕಿತ್ಸೆ ಮತ್ತು ಮಾಹಿತಿ ಕಾರ್ಯಕ್ರಮ

ಸುಮನಸಾ ಕೊಡವೂರು ಉಡುಪಿ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಕೊಡವೂರು, ಶ್ರೀ ದುರ್ಗಾ ಮಹಿಳಾ ಮಂಡಲ ಕೊಡವೂರು ಇವರ ಜಂಟಿ ಆಶ್ರಯದಲ್ಲಿ.. ಜಿಲ್ಲಾ ವಿವಿಧ ಆರೋಗ್ಯ ಘಟಕಗಳ ಸಹಯೋಗದೊಂದಿಗೆ ಕೊಡವೂರು "ವಿಪ್ರಶ್ರೀ" ಸಭಾಭವನದಲ್ಲಿ ಉಚಿತ ಆರೋಗ್ಯ ತಪಾಸಣಾ ಹಾಗೂ ಚಿಕಿತ್ಸೆ ಮತ್ತು ಮಾಹಿತಿ ಕಾರ್ಯಕ್ರಮ ನೆರವೇರಿತು. ಶಿಬಿರವನ್ನು ಉದ್ಘಾಟಿಸಿದ ಮಲ್ಪೆಯ ವೈದ್ಯಾಧಿಕಾರಿಗಳಾದ ಡಾಕ್ಟರ್ ಜೇಸ್ಮಾ ಸ್ಟೇಲ್ಲಾ ಪಿಕಾರ್ಡೋ ಅವರ ಮಾತನಾಡುತ್ತಾ ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಸಂಘಸಂಸ್ಥೆಗಳ ಪಾತ್ರ ಹಿರಿದು. ಹಾಗೂ ವಿಶೇಷವಾಗಿ ಮಹಿಳೆಯರು ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು, ನೀವು ಆರೋಗ್ಯವಂತರಾಗಿದ್ದರೆ ಇಡೀ ಕುಟುಂಬವೇ ಆರೋಗ್ಯವಾಗಿರುತ್ತದೆ ಮತ್ತು ಶಿಬಿರದ ಸೌಲಭ್ಯದ ಬಗ್ಗೆ ತಿಳಿಹೇಳಿದರು.... ತಂಬಾಕು ನಿಯಂತ್ರಣ ಜಿಲ್ಲಾ ಸಮಾಲೋಚಕರಾದ ಮಂಜುಳಾ ಶೆಟ್ಟಿ ಮಾಹಿತಿ ನೀಡಿದರು.. ಸಭಾಧ್ಯಕ್ಷತೆಯನ್ನು ಸುಮನಸಾ ಕೊಡವೂರು ಇದರ ಅಧ್ಯಕ್ಷರಾದ ಪ್ರಕಾಶ್ ಜಿ.ಕೊಡವೂರು ವಹಿಸಿಕೊಂಡಿದ್ದರು. ವೇದಿಕೆಯಲ್ಲಿ ಬ್ರಾಹ್ಮಣ ಮಹಾಸಭಾ ಕೊಡವೂರು ಇದರ ಅಧ್ಯಕ್ಷರಾದ ಸುರೇಂದ್ರ ಉಪಾಧ್ಯಾಯ.‌ ಉದ್ಯಮಿಗಳಾದ ರತ್ನಾಕರ್ ಅಮೀನ್, ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಕೃಷ್ಣ ದೇವಾಡಿಗ, ದುರ್ಗಾ ಮಹಿಳಾ ಮಂಡಲದ ಅಧ್ಯಕ್ಷರಾದ ಮೀನಾಕ್ಷಿ ಮಾಧವ, ಸುಮನಸಾ ಗೌರವಾಧ್ಯಕ್ಷರಾದ ಎಂ.ಎಸ್.ಭಟ್. ಸುಮನಸಾ ಸಂಚಾಲಕರಾದ ಭಾಸ್ಕರ್ ಪಾಲನ್ ಬಾಚನಬೈಲ್, ಡಾಕ್ಟರ್ ಸುಯೋಗ್, ಡಾಕ್ಟರ್ ವೈಭವ್, ಡಾಕ್ಟರ್ ತಪಸ್ ಹಾಗೂ ಮೈತ್ರಿ ಅವರ ಉಪಸ್ಥಿತರಿದ್ದರು..

ವಿದ್ಯಾದಾಯಿನಿ ಪ್ರಾರ್ಥನೆ ಗೈದರು, ಚಂದ್ರಕಾಂತ್ ಕುಂದರ್ ಪ್ರಸ್ತಾವನೆಯೊಂದಿಗೆ ಪ್ರಕಾಶ್ ಜಿ.ಕೊಡವೂರು ಎಲ್ಲರನ್ನೂ ಸ್ವಾಗತಿಸಿ, ಎಂ.ಎಸ್.ಭಟ್ ವಂದನಾರ್ಪಣೆ ಗೈದರು, ಯೋಗೀಶ್ ಕೊಳಲಗಿರಿ ಕಾರ್ಯಕ್ರಮ ನಿರೂಪಿಸಿದರು...