Header Ads Widget

ಕೊಡವೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಗಣೇಶನ ಚಿತ್ರ ಬಿಡಿಸುವ ಸ್ಪರ್ಧೆ ಹಾಗೂ ರಂಗವಲ್ಲಿ ಸ್ಪರ್ಧೆ

 


ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೊಡವೂರು ಇವರ ವತಿಯಿಂದ ಈ ಬಾರಿ ಆಚರಿಸಲ್ಪಡುವ 56ನೇ ಸಾರ್ವಜನಿಕ ಶ್ರೀ ಗಣೇಶೋತ್ಸವದ ಅಂಗವಾಗಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ಗಣೇಶನ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಆಗಸ್ಟ್25 ರಂದು ಅಪರಾಹ್ನ 2.00 ಗಂಟೆಗೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಆಯೋಜಿಸಲಾಗಿದೆ.

ಈ ಸ್ಪರ್ಧೆಯ ಕಾಲಾವಕಾಶ 2 ತಾಸುಗಳಾಗಿದ್ದು ಸ್ಪರ್ಧಾಳುಗಳಿಗೆ ಸಮಿತಿಯ ವತಿಯಿಂದ ಡ್ರಾಯಿಂಗ್ ಪೇಪರ್ ಒದಗಿಸ ಲಾಗುವುದು. ಪ್ರಾಥಮಿಕ ಶಾಲಾ 1ರಿಂದ 4ನೇ ತರಗತಿಯವರಿಗೆ ಸಬ್ ಜೂನಿಯರ್,5 ರಿಂದ 7ನೇ ತರಗತಿಯವರೆಗೆ ಜೂನಿಯರ್ ಹಾಗೂ ಪ್ರೌಢ ಶಾಲಾ 8 ರಿಂದ 10 ನೇ ತರಗತಿವರೆಗೆ ಸೀನಿಯರ್ ವಿಭಾಗ ಎಂದು ಪರಿಗಣಿಸಲಾಗುವುದು.

ಅಂದು ಸಂಜೆ 4.00 ಗಂಟೆಗೆ ಮಹಿಳೆಯರಿಗೆ ತಾಲೂಕು ಮಟ್ಟದ ರಂಗವಲ್ಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 8150824123,9980261549,7022809869 ಈ ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಬಹುದು.

ಸ್ಪರ್ಧಾಳುಗಳು ಹೆಚ್ಚಿನ ಸಂಖ್ಯೆಯಲ್ಲಿ ಕ್ಲಪ್ತ ಸಮಯದಲ್ಲಿ ಆಗಮಿಸಿ ಸ್ಪರ್ಧೆಯ ಯಶಸ್ಸಿಗೆ ಸಹಕಾರ ನೀಡುವಂತೆ ಸಮಿತಿಯ ಪ್ರಕಟಣೆ ತಿಳಿಸಿದೆ.