ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ಕನ್ನಡ ಜಾನಪದ ಪರಿಷತ್ ಬೆಂಗಳೂರು, ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕ ಹಾಗೂ ಉಡುಪಿ ತಾಲೂಕು ಘಟಕದ ಉಡುಪಿ ಜಿಲ್ಲಾ ಪ್ರಥಮ ಕನ್ನಡ ಜಾನಪದ ಸಮ್ಮೇಳನ -2024 ಆಗಸ್ಟ್ 27ರಂದು ಬೆಳಗ್ಗೆ 8.30ರಿಂದ ಮಧ್ಯಾಹ್ನ 1.30ರವರೆಗೆ ಉಡುಪಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ನಡೆಯಲಿದೆ.
ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿರುವರು. ಜಾನಪದ ವಿದ್ವಾಂಸ ಹಾಗೂ ಸಂಸ್ಕೃತಿ ಚಿಂತಕ ಡಾ.ಗಣನಾಥ ಎಕ್ಕಾರು ಅವರು ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದಾರೆ. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್.ಹೆಬ್ಬಾಳ್‌ಕರ್ ಅವರು ಸಮ್ಮೇಳನ ಉದ್ಘಾಟಿಸುವರು.
ಉಡುಪಿ ಶಾಸಕ ಯಶ್‌ಪಾಲ್ ಎ.ಸುವರ್ಣ ಅವರು ರಾಜ್ಯ ಜಾನಪದ ಪ್ರಪಂಚ ಪ್ರಶಸ್ತಿ ಪ್ರದಾನ ಮಾಡಲಿರುವರು. ಕನ್ನಡ ಜಾನಪದ ಪರಿಷತ್ ಬೆಂಗಳೂರು, ರಾಜ್ಯಾಧ್ಯಕ್ಷ ಡಾ.ಜಾನಪದ ಎಸ್.ಬಾಲಾಜಿ ಅಧ್ಯಕ್ಷತೆವಹಿಸುವರು. ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಗಣೇಶ್ ಗಂಗೊಳ್ಳ ಪ್ರಾಸ್ತಾವಿಕ ನುಡಿಗಳನ್ನಾಡಲಿರುವರು.
ಮುಖ್ಯಅತಿಥಿಗಳಾಗಿ ಕೋಟ ಗೀತಾನಂದ ಫೌಂಡೇಶನ್ ಅಧ್ಯಕ್ಷ ಆನಂದ ಸಿ.ಕುಂದರ್, ಮಾಜಿ ಶಾಸಕ ಕೆ.ರಘುಪತಿ ಭಟ್, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಇಲ್ಲಾ ಸಹಾಯಕ ನಿರ್ದೇಶಕಿ ಪೂರ್ಣಿಮಾ ಭಾಗವಹಿಸಲಿರುವರು. ಎನ್.ಆರ್.ದಾಮೋದರ್ ಶರ್ಮ ಕಾರ್ಯಕ್ರಮ ನಿರ್ವಹಣೆ ಮಾಡಲಿರುವರು.
ಜಾನಪದ ಗೋಷ್ಠಿ: ಜಾನಪದ ಮತ್ತು ಪ್ರಾಚ್ಯ ಇತಿಹಾಸ ಸಂಶೋಧಕ ಪ್ರೊ. ಎಸ್.ಎ.ಕೃಷ್ಣಯ್ಯ ಅವರು ಬ್ರಹ್ಮಾವರದಿಂದ ಹೆಬ್ರಿ, ಕಾರ್ಕಳ, ಕಾಪು, ಉಡುಪಿ ತಾಲೂಕಿನ ವಿಶಿಷ್ಠ ಜಾನಪದ ಆಚರಣೆ ಕುರಿತು ಹಾಗೂ ರಾಜ್ಯಪ್ರಶಸ್ತಿ ವಿಜೇತ ಶಿಕ್ಷಕ ನರೇಂದ್ರ ಕುಮಾರ್ ಕೋಟ ಅವರು ಬ್ರಹ್ಮಾವರದಿಂದ ಬೈಂದೂರು, ಶಿರೂರಿನವರೆಗೆ ಇರುವ ಕುಂದಾಪುರ ಕನ್ನಡದ ಜಾನಪದ ಸಂಸ್ಕೃತಿಯ ಬಗ್ಗೆ ಜಾನಪದ ಗೋಷ್ಠಿಯನ್ನು ನಡೆಸಿಕೊಡಲಿರುವರು.
ರಾಜ್ಯ ಜಾನಪದ ಪ್ರಪಂಚ ಪ್ರಶಸ್ತಿ ವಿಜೇತರು: ಸಮ್ಮೇಳನದಲ್ಲಿ ಹಿರಿಯ ತುಳು ಪಾಡ್ದನ ಕಲಾವಿದೆ ಅಪ್ಪಿ ಕೃಷ್ಣ ಪಾಣ ಮೂಡುಬೆಳ್ಳೆ, ಪಾಣರಾಟದ ಹಿರಿಯ ಕಲಾವಿದ ನಾಗರಾಜ ಪಾಣ ವಾಲ್ತೂರು ಕುಂದಾಪುರ, ಹಿರಿಯ ಜಾನಪದ ಕಲಾವಿದ ಶಂಕರದಾಸ್ ಚೇಂಡ್ಕಳ, ಜಾನಪದ ಸಂಪ್ರದಾಯ ಹಾಡುಗಾರ್ತಿ ಜಾಹ್ನವಿ ಹೆರ್ಳೆ ಸಾಲಿಗ್ರಾಮ,ಹೌಂದರಾಯನ ವಾಲ್ಗದ ಕಲಾವಿದ ಸತೀಶ್ ಕಾಂಚನ್, ಹಿರಿಯ ಯಕ್ಷಗಾನ ಕಲಾವಿದೆ ಜ್ಯೋತಿ ಮಾಧವ ಪ್ರಭು ಕೊಕ್ಕರ್ಣೆ, ಜಾನಪದ ಕಲಾವಿದ ಗಣೇಶ್ ಬಾರ್ಕೂರು ಅವರಿಗೆ ರಾಜ್ಯ ಜಾನಪದ ಪ್ರಪಂಚ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಸಮ್ಮೇಳನದಲ್ಲಿ ವಿಶೇಷ ಸನ್ಮಾನಿತರು: ಹಂಪಿ ಕನ್ನಡ ವಿಶ್ವವಿದ್ಯಾಲಯ ಜನಪದ ವಿಭಾಗದ ಮುಖ್ಯಸ್ಥ ಪ್ರೊ.ಚೆಲುವರಾಜು, ಕನ್ನಡ ಜಾನಪದ ಪರಿಷತ್ ಕರ್ನಾಟಕ ವಿಭಾಗೀಯ ಸಂಚಾಲಕ ಡಾ.ಶರಣಪ್ಪ ಗೋನಾಳ್, ಮೈಸೂರು ಕರಾವಳಿ ವಿಭಾಗೀಯ ಸಂಚಾಲಕರು ಡಾ.ಕಾವೇರಿ ಪ್ರಕಾಶ್, ರಾಮನಗರ ಜಿಲ್ಲಾ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಕೆ.ಸಿ.ಕಾಂತಪ್ಪ, ವಿಜಯಪುರ ಜಿಲ್ಲೆ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಬಾಲನಗೌಡ ಎಸ್.ಪಾಟೀಲ್, ಉಡುಪಿ ತಾಲೂಕು ಕನ್ನಡ ಜಾನಪದ ಪರಿಷತ್ ಅಧ್ಯಕ್ಷೆ ಮಾಯಾ ಕಾಮತ್, ಸಮಾಜಸೇವಕ ಮೊಹಮ್ಮದ್ ಫಾರೂಕ್ ಚಂದ್ರನಗರ ಇವರನ್ನು ಸನ್ಮಾನಿಸಲಾಗುವುದು.
ಸಾಂಸ್ಕೃತಿಕ ಕಾರ್ಯಕ್ರಮ, ಜಾನಪದ ನೃತ್ಯ ಸಿಂಚನ : ಜಾನಪದ ಕಲಾವಿದೆ ಭಜನೆ ರಾಮಣ್ಣ ಇವರ ಶಿಷ್ಯರಾದ ಸತೀಶ್ ಕಾಂಚನ್ ಬೀಜಾಡಿ ಮತ್ತು ಬಳಗದವರಿಂದ ಹೌಂದರಾಯನ ವಾಲ್ಗ ಮತ್ತು ಕೋಲಾಟ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ಬ್ರಾಹ್ಮರಿ ಜಾನಪದ ಕಲಾ ತಂಡದ ಶಂಕರ ದಾಸ್ ಚೇಂಡ್ಕಳ ಮತ್ತು ಬಳಗದವರಿಂದ ಕಂಗೀಲು ಮತ್ತು ಚೆನ್ನುಕುಣಿತ, ಡಾ.ಮಂಜುನಾಥ ದೇವಾಡಿಗ ಕೋಟೇಶ್ವರ ಇವರ ಬಳಗದಿಂದ ಮಂಗಳವಾದ್ಯ ನಡೆಯಲಿದೆ.ಉಡುಪಿ ಜಿಲ್ಲಾ ಘಟಕದ ಸದಸ್ಯರಿಂದ ಜಾನಪದ ಗಾನಯಾನ ಮತ್ತು ಉಡುಪಿ ತಾಲೂಕು ಕನ್ನಡ ಜಾನಪದ ಪರಿಷತ್ ಘಟಕದ ಸದಸ್ಯರಿಂದ ಜಾನಪದ ನೃತ್ಯವೈಭವ ಕಾರ್ಯಕ್ರಮ ನಡೆಯಲಿದೆ.
ಸಮ್ಮೇಳನದ ಸಮಾರೋಪ ಸಮಾರಂಭ: ಜಾನಪದ ವಿದ್ವಾಂಸ ಹಾಗೂ ಸಂಸ್ಕೃತಿ ಚಿಂತಕ ಡಾ.ಗಣನಾಥ ಎಕ್ಕಾರು ಅವರ ಸರ್ವಾಧ್ಯಕ್ಷತೆಯಲ್ಲಿ ಸಮ್ಮೇಳನದ ಸಮಾರೋಪ ಸಮಾರಂಭ ಅಂದು ಮಧ್ಯಾಹ್ನ ೧೨.೩೦ಕ್ಕೆ ನಡೆಯಲಿದೆ. ಕನ್ನಡ ಜಾನಪದ ಪರಿಷತ್ ಬೆಂಗಳೂರು ರಾಜ್ಯ ಸಂಚಾಲಕ ಪ್ರೊ.ಕೆ.ಎಸ್.ಕೌಜಲಗಿ ಸಮಾರೋಪ ಭಾಷಣ ಮಾಡಲಿರುವರು. ಮುಖ್ಯ ಅತಿಥಿ ಗಳಾಗಿ ಕನ್ನಡ ಜಾನಪದ ಪರಿಷತ್ ಬೆಂಗಳೂರು, ರಾಜ್ಯಾಧ್ಯಕ್ಷ ಡಾ.ಜಾನಪದ ಎಸ್.ಬಾಲಾಜಿ, ಕುಂದಾಪುರದ ಸೂಪರ್‌ಗ್ರೇಡ್ ಗುತ್ತಿಗೆದಾರ ಕೆ.ಆರ್ ನಾಯಕ್, ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ ಸುರೇಂದ್ರ ಅಡಿಗ, ಉಡುಪಿ ಜಿಲ್ಲಾ ಕ್ರೀಡಾ ಮತ್ತು ಯುವಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ, ಉಡುಪಿ ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ, ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ ಭಾಗವಹಿಸಲಿರುವರು.
ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಗಣೇಶ್ ಗಂಗೊಳ್ಳಿ, ಪ್ರಕಾಶ್ ಕಟಪಾಡಿ , ಮಾಯಾ ಕಾಮತ್ ಹಾಗು ಪ್ರಶಾಂತ್ ಶಿರೂರು ಉಪಸ್ಥಿತರಿದ್ದರು