Header Ads Widget

ಪ್ರಿಂಟರ್ಸ್ ಅಸೋಸಿಯೇಷನ್ ನಿಂದ ವೈದ್ಯಕೀಯ ನೆರವು ಹಸ್ತಾಂತರ

 


ಉಡುಪಿ ಜಿಲ್ಲಾ ಮುದ್ರಣಾಲಯಗಳ ಮಾಲಕರ ಸಂಘ (ರಿ.) ವತಿಯಿಂದ ಸಂಘದ ಕಾಪು ವಲಯದ ಸದಸ್ಯರಾಗಿರುವ ಶ್ರೀ ವೆಂಕಟೇಶ್ ಆಚಾರ್ಯ ಅವರ ಆರೋಗ್ಯ ಸಮಸ್ಯೆಯನ್ನು ಮನಗಂಡು ಸಂಘದ ಸದಸ್ಯರಿಂದ ಆರ್ಥಿಕ ನೆರವನ್ನು ಸಂಗ್ರಹಿಸಲಾಯಿತು. ಜಮೆಯಾದ ಮೊತ್ತವನ್ನು ಆಗಸ್ಟ್ 18 ರಂದು ಭಾನುವಾರ ಸಂಜೆ ಅವರ ಮನೆಗೆ ತೆರಳಿ ಚೆಕ್ ಮುಖಾಂತರ ಹಸ್ತಾಂತರಿಸಲಾಯಿತು. ಉಡುಪಿ ಜಿಲ್ಲಾ ಮುದ್ರಣಾಲಯಗಳ ಮಾಲಕರ ಸಂಘದ ಅಧ್ಯಕ್ಷರಾದ ಶ್ರೀ ಪ್ರಕಾಶ್ ಕೊಡವೂರು ನೆರವನ್ನು ಹಸ್ತಾಂತರಿಸಿದರು. ರಾಜ್ಯ ಮುದ್ರಕರ ಸಮನ್ವಯ ಸಮಿತಿಯ ಸಂಚಾಲಕರಾದ ಶ್ರೀ ಮಹೇಶ್ ಕುಮಾರ್, ಸಂಘದ ಜಿಲ್ಲಾ ಕಾರ್ಯದರ್ಶಿ ಶ್ರೀ ಜಿ.ಎಂ. ಶರೀಫ್, ಮಾಜಿ ಅಧ್ಯಕ್ಷರಾದ ಶ್ರೀ ರಮೇಶ ತಿಂಗಳಾಯ, ಕಾಪು ವಲಯ ಅಧ್ಯಕ್ಷರಾದ ಶ್ರೀ ಸುಧೀರ್ ಬಂಗೇರ, ಕಾರ್ಯದರ್ಶಿ ಶ್ರೀ ಪ್ರಭಾಕರ್, ಸದಸ್ಯರಾದ ಮಂಜುನಾಥ ಗಡಿಯಾರ್, ವಿನೇಶ್ ಕುಮಾರ್ ಶಿರ್ವ ಹಾಗೂ ಸಂತ್ರಸ್ತರ ಕುಟುಂಬದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.