Header Ads Widget

ಮುದ್ದುಕೃಷ್ಣ ಸ್ಪರ್ಧೆ

ಪದ್ಮಶಾಲಿ ಯುವ ವೇದಿಕೆ, ಆದಿಶಕ್ತಿ ಪದ್ಮಶಾಲಿ ಮಹಿಳಾ ವೇದಿಕೆ, ಶ್ರೀ ಆದಿಶಕ್ತಿ ವೀರಭದ್ರ ಬ್ರಹ್ಮಲಿಂಗ ದೇವಸ್ಥಾನ ಅಂಚೆ ಸಂತೆಕಟ್ಟೆ ಕಲ್ಯಾಣಪುರ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಸಾರ್ವಜನಿಕರಿಗಾಗಿ ಮುದ್ದುಕೃಷ್ಣ ಸ್ಪರ್ಧೆ.
ದಿನಾಂಕ : 18-08-2024, ಆದಿತ್ಯವಾರ, ಅಪರಾಹ್ನ ಗಂಟೆ 2-30ಕ್ಕೆ, ಸ್ಥಳ : ದೇವಸ್ಥಾನದ ಸಭಾಂಗಣ.
ಸ್ಪರ್ಧಾ ವಿಭಾಗಗಳು : 2 ವರ್ಷಗಳ ವರೆಗೆ, 2 ವರ್ಷಕ್ಕೆ ಮೇಲ್ಪಟ್ಟು 4 ವರ್ಷಗಳ ವರೆಗೆ, 4 ವರ್ಷಕ್ಕೆ ಮೇಲ್ಪಟ್ಟು 6 ವರ್ಷಗಳ ವರೆಗೆ

ನಿಯಮಗಳು:-
1. ಸ್ಪರ್ಧಾಳುಗಳು ಸ್ಪರ್ಧೆ ಪ್ರಾರಂಭವಾಗುವ ಕನಿಷ್ಠ ಅರ್ಧ ಗಂಟೆ ಮುಂಚಿತವಾಗಿ ಹೆಸರನ್ನು ನೋಂದಾಯಿಸಬೇಕು.
2. 2 ವರ್ಷಗಳವರೆಗಿನ ವಿಭಾಗದಲ್ಲಿ ಯಶೋದೆಯಾಗಿ ತಾಯಂದಿರು ಭಾಗವಹಿಸಬಹುದು. ಆದರೆ ಕಡ್ಡಾಯವಲ್ಲ.
3. ಪ್ರತಿ ವಿಭಾಗದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ನೀಡಲಾಗುವುದು ಹಾಗೂ ಭಾಗವಹಿಸುವ ಪ್ರತಿಯೊಬ್ಬ ಸ್ಪರ್ಧಾಳುವಿಗೆ ಪ್ರಮಾಣ ಪತ್ರ ನೀಡಲಾಗುವುದು.
4. ಪ್ರತಿ ವಿಭಾಗದ ಸ್ಪರ್ಧಾಳುಗಳಿಗೆ ಗರಿಷ್ಠ 2 ನಿಮಿಷಗಳ ಕಾಲಾವಕಾಶ ಇರುವುದು.
5. ವೇಷಭೂಷಣ ಮತ್ತು ಅಭಿನಯಕ್ಕೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಲಾಗುವುದು ಹಾಗೂ ರಂಗ ಪರಿಕರಗಳನ್ನು ಅಂಕಕ್ಕೆ ಪರಿಗಣಿಸಲಾಗುವುದಿಲ್ಲ.
6. ಸ್ಪರ್ಧಾಳುಗಳು ಮುದ್ರಿತ ಧ್ವನಿಸುರುಳಿಗಳನ್ನು ಉಪಯೋಗಿಸಬಹುದು. ಆದರೆ ಕಡ್ಡಾಯವಲ್ಲ.

- ಹೆಚ್ಚಿನ ಮಾಹಿತಿಗಾಗಿ: ದೇವಳದ ಕಚೇರಿ:0820-2581809,  ಅಜಿತ್ ಶೆಟ್ಟಿಗಾರ್ ಕಪ್ಪೆಟ್ಟು, :  8618045241