ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಮುಂಬರುವ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬ ಪ್ರಯುಕ್ತ ಒಂದು ತಿಂಗಳ ಕಾಲ ಆಚರಿಸಲ್ಪಡುತ್ತಿರುವ ಶ್ರೀ ಕೃಷ್ಣ ಮಾಸೋತ್ಸವದ ಅಂಗವಾಗಿ ಉಡುಪಿಯ ಮಠದಲ್ಲಿ ಚಾತುರ್ಮಾಸ್ಯದಲ್ಲಿರುವ ಭಂಡಾರಕೇರಿ ಮಠಾಧೀಶರಾದ ಪರಮಪೂಜ್ಯ ವಿದ್ಯೇಶ ತೀರ್ಥ ಶ್ರೀಪಾದರಿಂದ ಭಗವದ್ಗೀತೆಯ 15ನೆಯ ಅಧ್ಯಾಯದ ಪ್ರವಚನವನ್ನು ಆಯೋಜಿಸಲಾಗಿದ್ದು ಉಪನ್ಯಾಸ ಕಾರ್ಯಕ್ರಮವನ್ನು ಪರ್ಯಾಯ ಶ್ರೀ ಪುತ್ತಿಗೆ ಶ್ರೀಪಾದದ್ವಯರು ದೀಪ ಜ್ವಲನೆ ಮಾಡುವುದರ ಮೂಲಕ ಉದ್ಘಾಟಿಸಿದರು ಈ ಉಪನ್ಯಾಸವು ಅಗಸ್ಟ 17ರ ವರೆಗೆ ಪ್ರತಿನಿತ್ಯ ಸಂಜೆ 6 ಘಂಟೆಯಿಂದ ರಾಜಾಂಗಣದಲ್ಲಿ ನಡೆಯಲಿದೆ.