2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಕಂಚಿನ ಪದಕ ಸಿಕ್ಕಿದೆ. ಪುರುಷರ ಕುಸ್ತಿ 57 ಕೆಜಿ ಪ್ರೀಸ್ಟೈಲ್ ವಿಭಾಗದಲ್ಲಿ ಭಾರತದ ಅಮನ್ ಸೆಹ್ರಾವತ್ ಕಂಚು ಗೆದ್ದು ಬೀಗಿದ್ದಾರೆ. 2024ರ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಇಲ್ಲಿವರೆಗೆ 5 ಕಂಚು, ಒಂದು ಬೆಳ್ಳಿ ಪದಕ ದಕ್ಕಿದೆ.
ಶುಕ್ರವಾರ ಚಾಂಪ್ ಡಿ ಅರೆನಾದಲ್ಲಿ ನಡೆದ ಪ್ಯಾರಿಸ್ 2024 ರ ಒಲಿಂಪಿಕ್ಸ್‌ನಲ್ಲಿ ಪೋರ್ಟೊ ರಿಕೊದ ಡೇರಿಯನ್ ಟೊಯಿ ಕ್ರೂಜ್ ಅವರನ್ನು ಸೋಲಿಸಿ ಕಂಚಿನ ಪದಕ ಗೆದ್ದ ಭಾರತದ ಅಮನ್ ಸೆಹ್ರಾವತ್ ಕುಸ್ತಿಯಲ್ಲಿ ಕಂಚಿನ ಪದಕವನ್ನು ಪಡೆದರು.
ಪ್ಯಾರಿಸ್ ಸಮ್ಮರ್ ಗೇಮ್ಸ್‌ನ ಅತ್ಯಂತ ಕಿರಿಯ ಪುರುಷ ಕುಸ್ತಿಪಟು ಅಮನ್ ಮಂಗಳವಾರ ನಡೆದಿದ್ದ ಸೆಮಿಫೈನಲ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಕುಸ್ತಿಪಟು ಜಪಾನ್‌ನ ರೇ ಹಿಗುಚಿ ವಿರುದ್ಧ ಸೋತಿದ್ದರು.