ಉಡುಪಿ ಜಿಲ್ಲಾ ಸೆನ್ ಠಾಣಾ ಪೊಲೀಸರಿಂದ ಕ್ಷಿಪ್ರ ಕಾರ್ಯಾಚರಣೆ, 2 ಜನ ಆರೋಪಿಗಳ ಬಂಧನ, ರೂ, 13,95,000/- ನಗದು ಸ್ವಾಧೀನಪಡಿಸಲಾಗಿದೆ.
ದಿನಾಂಕ:29/07/2024 ರಂದು ಮೊಬೈಲ್ ನಂಬ್ರ+919232037584 ರಿಂದ ಯಾರೋ ಅಪರಿಚಿತರು ಕರೆಮಾಡಿ ಕಸ್ಟಮ್ಸ್‌ನಿಂದ ಕರೆಮಾಡುತ್ತಿರುವುದಾಗಿ ತಿಳಿಸಿ ನಿಮ್ಮ ಆಧಾರ್ ನಂಬ್ರ ಬಳಸಿ ಬುಕ್ ಆಗಿರುವ FedEx ಕೋರಿಯರ್‌ನಲ್ಲಿ 5 ಪಾಸ್ ಪೋರ್ಟ್, 5 ಎ.ಟಿ.ಎಮ್ ಕಾರ್ಡ್, 200 ಗ್ರಾಂ ಎಂ.ಡಿ.ಎಮ್.ಎ ಹಾಗೂ 5000 USD ಇದ್ದು ಸದ್ರಿ ಕೋರಿಯರ್ ಪ್ರಸ್ತುತ ಮುಂಬಯಿ ಕಸ್ಟಮ್ಸ್‌ರವರ ವಶದಲ್ಲಿ ಇರುವುದಾಗಿ ತಿಳಿಸಿರುತ್ತಾರೆ.
ಮಾಹಿತಿದಾರರು ಸದರಿ ಕೋರಿಯರ್ ತಾನು ಮಾಡಿಲ್ಲವಾಗಿ ತಿಳಿಸಿದಾಗ ಅಪರಿಚಿತ ವ್ಯಕ್ತಿ ಆತನ ಮೇಲಾಧಿಕಾರಿಯವರಿಗೆ ಹಾಟ್‌ಲೈನ್ ಮುಖೇನಾ ಸಂಪರ್ಕ ಕಲ್ಪಿಸಿಕೊಟ್ಟಿದ್ದು, ಸದ್ರಿ ಹಾಟ್‌ಲೈನ್‌ನಲ್ಲಿ ಪೊಲೀಸ್ ಅಧಿಕಾರಿ ಎಂದು ನಂಬಿಸಿ ಪಿರ್ಯಾದಿದಾರರಿಗೆ ನಿಮ್ಮ ಆಧಾರ್ ಕಾರ್ಡ್‌ನ ದುರ್ಬಳಕೆಯ ಬಗ್ಗೆ ದೂರನ್ನು ಸ್ವೀಕರಿಸಲಾಗಿದೆ ಎಂದು ತಿಳಿಸಿ ನಮ್ಮ ಕೇಂದ್ರ ಕಚೇರಿಗೆ ಕರೆಯನ್ನು ಫಾರ್ವಡ್ ಮಾಡುವುದಾಗಿ ತಿಳಿಸಿ ನಂತರದಲ್ಲಿ ಕರೆ ಸ್ವೀಕರಿಸಿದ ವ್ಯಕ್ತಿ ನಿಮ್ಮ ಆಧಾರ್ ಕಾರ್ಡ್ ವಿವಿಧ ಬ್ಯಾಂಕ್ ಖಾತೆಗಳಿಗೆ ಲಿಂಕ್ ಆಗಿದ್ದು ಹಾಗೂ ಭಯೋತ್ಪಾದಕರು ಸಿಮ್ ಖರೀದಿಸಲು ಬಳಸಿರುವುದಾಗಿ ತಿಳಿಸಿರುತ್ತಾರೆ.
ಈ ದೂರಿಗೆ ಸಂಬಂಧಿಸಿ ನಿಮ್ಮನ್ನು ವರ್ಚುವಲ್ ಆರೆಸ್ಟ್ ಮಾಡುವುದಾಗಿ ತಿಳಿಸಿದ್ದು Skype App ಮೂಲಕ ವಿಡಿಯೋ ಮಾನಿಟರಿಂಗ್ ಮಾಡುವುದಾಗಿ ತಿಳಿಸಿದ್ದು, ಅದರಂತೆ ಮಾಹಿತಿದಾರರನ್ನು ದಿನಾಂಕ: 29/07/2024 ರಿಂದ ದಿನಾಂಕ: 09/08/2024ರ ತನಕ ಅವರ ಮನೆಯ ರೂಮ್ ಒಂದರಲ್ಲಿ ಇರುವಂತೆ ಹಾಗೂ ಬೇರೆ ಯಾರೊಂದಿಗೂ ಸಂಪರ್ಕಿಸದಂತೆ ಸೂಚಿಸಿ ರುತ್ತಾರೆ.
ನಂತರದಲ್ಲಿ ಸದ್ರಿ ಪ್ರಕರಣವನ್ನು ಸರಿ ಪಡಿಸಲು ಅಪರಿಚಿತರು ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ಪಾವತಿಸುವಂತೆ ತಿಳಿಸಿದ್ದು, ಅದರಂತೆ ಪಿರ್ಯಾದಿದಾರರು ತನ್ನ ಹೆಚ್.ಡಿ.ಎಫ್.ಸಿ ಬ್ಯಾಂಕಿನ ಉಳಿತಾಯ ಖಾತೆಯಿಂದ ದಿನಾಂಕ:06/08/2024 ರಿಂದ ದಿನಾಂಕ:09/08/2024ರ ತನಕ ಹಂತ ಹಂತವಾಗಿ ಒಟ್ಟು ರೂಪಾಯಿ 1,33,81,000/- ಹಣವನ್ನು ವರ್ಗಾಯಿಸಿರುತ್ತಾರೆ.
ಈ ಬಗ್ಗೆ ಶ್ರೀ ಅರುಣ್ ಕುಮಾರ್ ಗೋವಿಂದ ಕರ್ನವರ್ ರವರು ನೀಡಿದ ದೂರಿನಂತೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ : 61/2024 ಕಲಂ: 66(C) 66(D) ಐ.ಟಿ. ಕಾಯ್ದೆ ಮತ್ತು ಕಲಂ 318(4) BNS ಯಂತೆ ಪ್ರಕರಣ ದಾಖಲಾಗಿರುತ್ತದೆ.