ಸೈಂಟ್ ಪೀಟರ್ ಚರ್ಚ್ ಪೇತ್ರಿ, ಮತ್ತು ಭಾರತೀಯ ಕೆಥೋಲಿಕ್ ಯುವ ಸಂಚಾಲನ್ ಪೇತ್ರಿ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಚರ್ಚ್‌ನ ವಠಾರದಲ್ಲಿ ಭಾನುವಾರ ಗೆದ್ಯಾಂತ್ ಏಕ್ ದೀಸ್(ಕೆಸರು ಗದ್ದೆಯಲ್ಲಿ ಒಂದು ದಿನ) ಕಾರ್ಯಕ್ರಮ ನಡೆಯಿತು. ಸೈಂಟ್ ಪೀಟರ್ ಚರ್ಚ್‌ನ ಧರ್ಮಗುರುಗಳಾದ ರೆವೆರೆಂಡ್ ಫಾದರ್ ವಿಕ್ಟರ್ ಡಿಸೋಜ ಕಾರ್ಯಕ್ರಮವನ್ನು ತೆಂಗಿನ ಹೂವು ಅರಳಿಸುವ ಮೂಲಕ ಉದ್ಘಾಟಿಸಿ, ಕೃಷಿ ಸಂಸ್ಕೃತಿಯನ್ನು ಉಳಿಸುವಂತಹ ಮತ್ತು ಇಂದಿನ ಮಕ್ಕಳಿಗೆ ಕೃಷಿಯ ಮಹತ್ವ ತಿಳಿಯುವಂತಹ ಇಂತಹ ಕಾರ್ಯಕ್ರಮ ಅರ್ಥಪೂರ್ಣ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸೈಂಟ್ ಪೀಟರ್ ಚರ್ಚ್‌ನ ಕಾರ್ಯದರ್ಶಿ ವಿನ್ಸೆಂಟ್ ಡಿ.ಅಲ್ಮೇಡಾ, ಉಪಾಧ್ಯಕ್ಷ ಎಡ್ವರ್ಡ್ ಲಾರ್ಸನ್, ಪತ್ರಕರ್ತ ಮೋಹನ ಉಡುಪ ಪ್ರೇಮಾ ಡಿ.ಅಲ್ಮೇಡಾ, ಭಾರತೀಯ ಕೆಥೋಲಿಕ್ ಯುವ ಸಂಚಾಲನ್ ಪೇತ್ರಿ ಘಟಕದ ಅಧ್ಯಕ್ಷ ಮ್ಯಾಕ್ಸನ್, ಮುಖ್ಯ ಸಚೇತಕ ಆಲ್ವಿನ್ ಡಿಸೋಜ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಚರ್ಚ್‌ನ ಆಡಳಿತ ಮಂಡಳಿ, ಸಿಬ್ಬಂದಿ ವರ್ಗ, ಭಾರತೀಯ ಕೆಥೋಲಿಕ್ ಯುವ ಸಂಚಾಲನ್ ಪೇತ್ರಿ ಘಟಕದ ಸದಸ್ಯರುಗಳು, ಮತ್ತಿvರರು ಉಪಸ್ಥಿತರಿದ್ದರು.
ಕೆಸರು ಗದ್ದೆಯಲ್ಲಿ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆದವು. ರೂವೆಲ್ ಸ್ವಾಗತಿಸಿ, ಜೆಲಿಶಾ ಕಾರ್ಯಕ್ರಮ ನಿರೂಪಿಸಿ, ರೆಲಿಶಾ ವಂದಿಸಿದರು.