ಪ್ರಾಮಾಣಿಕತೆ, ವೃತ್ತಿ ಬದ್ಧತೆ ಮತ್ತು ಸಂಸ್ಥೆಯ ಮೇಲಿರುವ ಆಗಾಧ ಪ್ರೀತಿ ನೌಕರರ ಅಭಿವೃದ್ಧಿಗೆ ದಾರಿ ದೀಪವಾಗುವುದು ನಿಸ್ಸಂದೇಹ. ಸಂಸ್ಥೆಯ ಅಭಿವೃದ್ಧಿ ಎಲ್ಲಾ ನೌಕರರ ಪ್ರಾಮಾಣಿಕ ಸೇವೆಯ ಬುನಾದಿಯ ಮೇಲೆ ಅವಲಂಬಿತವಾಗಿರುವುದು. ಈ ದಿಸೆಯಲ್ಲಿ ಉಡುಪಿ ಮತ್ತು ಅದಮಾರು ಪೂರ್ಣಪ್ರಜ್ಞ ಸಂಸ್ಥೆಗಳ ಎಲ್ಲಾ ಶಿಕ್ಷಕೇತರ ನೌಕರರಿಗೆ ಆಯೋಜಿಸಲಾದ ಒಂದು ದಿನದ ವಿಶೇಷ ತರಬೇತಿ ಶಿಬಿರದ ಉದ್ಘಾಟನೆ ನೇರವೇರಿಸಿದ ಉದ್ಘಾಟಕರಾದ ಡಾ| ಶ್ರೀರಮಣ ಐತಾಳ್ ತಮ್ಮ ಮಾತುಗಳಲ್ಲಿ ಮನವರಿಕೆ ಮಾಡಿದರು.
ಪೂರ್ಣಪ್ರಜ್ಞ ಕಾಲೇಜಿನ ಮಿನಿ ಆಡಿಟೋರಿಯಂ ನಲ್ಲಿ ಆಯೋಜಿಸಲಾದ ಈ ಕಾರ‍್ಯಕ್ರಮದ ಮುಖ್ಯ ಅತಿಥಿಗಳಾದ ಡಾ|ಅಶೋಕ್ ಕಾಮತ್, ಸಂಸ್ಥೆಯ ಪ್ರಾಂಶುಪಾಲರುಗಳಾದ ಡಾ.ರಾಮು ಎಲ್, ಡಾ|ಸುಕನ್ಯಾ ಮೇರಿ ವೇದಿಕೆಯಲ್ಲಿ ಉಪಸ್ಥಿತರಿದ್ಧರು.
.ಎ.ಪಿ.ಕೊಡಂಚ ಕಾರ‍್ಯಕ್ರಮದ ನಿರೂಪಕರಾಗಿ ಅತಿಥಿಗಳನ್ನು ಸ್ವಾಗತಿಸಿದರು. ಕಾಲೇಜಿನ ಕಛೇರಿ ವ್ಯವಸ್ಥಾಪಕ ಬಿ.ಬಾಲಚಂದ್ರ ಸಾಮಗ ಧನ್ಯವಾದ ವಿತ್ತರು ಕಛೇರಿ ಸಹಾಯಕಿ ಶ್ವೇತ ಮತ್ತು ದೀಪಿಕಾ ಪ್ರಾರ್ಥನೆ ನೆರವೇರಿಸಿದರು. ಸಂಪನ್ಮೂಲ ವ್ಯಕ್ತಿ ಗಳಾದ ಡಾ|ತೇಜಸ್ವಿನಿ ಪಾಟೀಲ್, ಶೈಲಾ ಶ್ಯಾಮನೂರ್, ಶ್ರೀ. ಸಿ.ಎ ಲಕ್ಷ್ಮೀಶ ರಾವ್ ಹಾಗೂ ಶ್ರೀ.ಎ.ಪಿ.ಕೊಡಂಚ ಸುಮಾರು 90 ಶಿಕ್ಷಕೇತರ ನೌಕರರಿಗೆ ವಿವಿಧ ವಿಷಯಗಳ ಮೇಲೆ ಮಾಹಿತಿ ನೀಡಿ ಸಹಕರಿಸಿದರು.