Header Ads Widget

ಮಾಹೆಯ ಹೆಬ್ಬಾರ್‌ ಗ್ಯಾಲರಿ ಆ್ಯಂಡ್‌ ಆರ್ಟ್ಸ್‌ ಸೆಂಟರ್‌ನಲ್ಲಿ ರಾಜಸ್ತಾನಿ ಕಲಾವಿದರ ಜಾನಪದ ಸಂಗೀತ ಕಾರ್ಯಕ್ರಮ

 


ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ [ಮಾಹೆ]ನ ಹೆಬ್ಬಾರ್‌ ಆರ್ಟ್‌ ಗ್ಯಾಲರಿ ಆ್ಯಂಡ್‌ ಆರ್ಟ್‌ ಸೆಂಟರ್‌ [ಎಚ್‌ಜಿಎಸಿ] ಯು ಜೋಧ್‌ಪುರದ ಪ್ರಸಿದ್ಧ ಕಲಾವಿದರಿಂದ ಸಂಗೀತ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು ಇದು ಆಗಸ್ಟ್‌ 23, 2024 ರಂದು ಮಣಿಪಾಲ್‌ ಸೆಂಟರ್‌ ಫಾರ್‌ ಹ್ಯುಮಾನಿಟೀಸ್‌ನ ಗಂಗೂಬಾಯಿ ಹಾನಗಲ್‌ ಆಡಿಟೋರಿಯಂನಲ್ಲಿ ನಡೆಯಲಿದೆ.

ಈ ವಿಶಿಷ್ಟ ಸಂಗೀತ ಕಾರ್ಯಕ್ರಮದಲ್ಲಿ ಸಿಂಧಿ ಸಾರಂಗಿ, ಧೋಲಕ್‌, ಮೋರ್ಚಿಂಗ್‌ ಮತ್ತು ಖರ್ತಾಲ್‌- ಹೀಗೆ ನಾಲ್ಕು ದೇಸಿ ವಾದ್ಯಗಳನ್ನು ಒಳಗೊಂಡಿದೆ. ಈ ನಾಲ್ಕು ವಾದ್ಯಗಳು ರಾಜಸ್ತಾನ ಮತ್ತು ಉತ್ತರಭಾರತದ ಸಾಂಪ್ರದಾಯಿಕ ಜಾನಪದ ಮತ್ತು ಭಕ್ತಿ ಸಂಗೀತಗಳಲ್ಲಿ ಬಳಕೆಯಾಗುತ್ತವೆ. 

ಈ ಸಂಗೀತ ಪ್ರದರ್ಶನಕ್ಕೆ ಮುಕ್ತ ಪ್ರವೇಶವಿದ್ದು ಮೊದಲು ಬಂದವರಿಗೆ ಮೊದಲ ಆದ್ಯತೆಯಾನ್ವಯ ಆಸನ ಸೌಲಭ್ಯವಿದೆ. ಸಂಜೆ 6.15 ದ ಬಳಿಕ ಸಭಾಂಗಣಕ್ಕೆ ಪ್ರವೇಶವಿಲ್ಲ.