Header Ads Widget

ಕುರಾಡಿ ಸೀತಾರಾಮ ಅಡಿಗ ಕಾವ್ಯ ಪ್ರಶಸ್ತಿ ಪ್ರದಾನ, ಮಹಿಳಾ ಕಾವ್ಯ ಸಂವಾದ ಹಾಗೂ ಪುಸ್ತಕ ಬಿಡುಗಡೆ


ಸಂಸ್ಕೃತಿ ವಿಶ್ವ ಪ್ರತಿಷ್ಠಾನ ( ರಿ) ಉಡುಪಿ ಆಯೋಜನೆಯಲ್ಲಿ ಸಂಸ್ಕೃತಿ ಭಾರತಿ ಕರ್ನಾಟಕ ಪ್ರತಿಷ್ಠಾನ ಬೆನಗಲ್ ಪ್ರಾಯೋಜ ಕತ್ವದ ಕವಿ ದಿ| ಕುರಾಡಿ ಸೀತಾರಾಮ ಅಡಿಗ ಕಾವ್ಯ ಪ್ರಶಸ್ತಿ ಪ್ರದಾನ 2024 , ಮಹಿಳಾ ಕಾವ್ಯ ಸಂವಾದ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮ ಆಗಸ್ಟ್ 24 ಶನಿವಾರ ಸಂಜೆ 5:30ಕ್ಕೆ ಶ್ರೀ ಜನಾರ್ಧನ ಮತ್ತು ಮಹಾಕಾಳಿ ದೇವಸ್ಥಾನ ಅಂಬಲ ಪಾಡಿಯ ಭವಾನಿ ಮಂಟಪದಲ್ಲಿ ನಡೆಯಲಿದೆ.

ಕವಿಗಳಾದ ವಿಜಯಪುರದ ಸುಮಿತ್ ಮೇತ್ರಿ ಹಾಗೂ ಮಂಗಳೂರಿನ ಜಯಶ್ರೀ ಬಿ. ಕದ್ರಿ ಅವರು ಪ್ರಶಸ್ತಿಯನ್ನು ಪಡೆದಿದ್ದು ,
ರೂಪಾಯಿ 10,000 ದೊಂದಿಗೆ ಪ್ರಶಸ್ತಿ ಪತ್ರ, ಫಲಕ ನೀಡಿ ಗೌರವಿಸಲಾಗುವುದು.

ಮಹಿಳಾ ಕಾವ್ಯ ಸಂವಾದದಲ್ಲಿ ಉಡುಪಿ ಜಿಲ್ಲೆಯ ಮಹಿಳಾ ಕವಯತ್ರಿಯರಾದ ಡಾ. ಮಾಧವಿ ಭಂಡಾರಿ, ಡಾ. ನಿಕೇತನ, ಸುಕನ್ಯಾ ಕಳಸ, ಸುಧಾ ಅಡುಕಳ, ಪೂರ್ಣಿಮಾ ಸುರೇಶ್ ಭಾಗವಹಿಸಲಿದ್ದು, ಕಾವ್ಯ ಗಾಯನವನ್ನು ವಿದುಷಿ ಉಮಾಶಂಕರಿ ನಡೆಸಿಕೊಡಲಿದ್ದಾರೆ. ಇದೇ ಸಂದರ್ಭದಲ್ಲಿ ಕುರಾಡಿ ಸೀತಾರಾಮ ಅಡಿಗ ಅವರು ಬರೆದ ಪುಸ್ತಕ "ಜೀವನ ರೇಖೆ " ಮರು ಮುದ್ರಣ ಲೋಕಾರ್ಪಣೆಗೊಳ್ಳಲಿದೆ ಎಂದು ಪ್ರಶಸ್ತಿ ಪ್ರದಾನ ಸಮಿತಿಯ ಸಂಚಾಲಕಿ ಪೂರ್ಣಿಮಾ ಜನಾದ೯ನ್ ಹಾಗೂ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಂಚಾಲಕ ರವಿರಾಜ್ ಎಚ್ ಪಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ .