Header Ads Widget

ಶಿಕ್ಷಣದ ಜೊತೆಗೆ ಮನೆತನದ ವೃತ್ತಿ ಮಕ್ಕಳಿಗೆ ಕಲಿಸಬೇಕು~ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ  ಶ್ರೀಪಾದರು 

 


ಜಾಗತೀಕರಣ ಪ್ರಭಾವದಿಂದಾಗಿ ಪಾರಂಪರಿಕ ಕರಕುಶಲತೆ ಕ್ಷೀಣಿಸುತ್ತಿದೆ. ಮಕ್ಕಳನ್ನು ವೈದ್ಯರು ಅಥವಾ ಇಂಜಿನಿಯರ್‌ ಗಳನ್ನಾಗಿಸುವ ಪ್ರವೃತ್ತಿ ಬೆಳೆಯುತ್ತಿದೆ. ಎಲ್ಲ ಸಮಾಜ ಒಂದೇ ಕಡೆಗೆ ನುಗ್ಗಿದರೆ ಅಸಮತೋಲನ ಉಂಟಾಗಿ ಸಮಾಜದ ಬಣ್ಣಗೆಡುತ್ತಿದೆ. ಹೀಗಾಗಿ ಆಧುನಿಕ ಶಿಕ್ಷಣದ ಜತೆಗೆ ಮನೆತನದ ವೃತ್ತಿ ಹಾಗೂ ವಂಶಪರಂಪರೆಯ ಕೌಶಲವನ್ನು ಮಕ್ಕಳಿಗೆ ಕಲಿಸಬೇಕು ಎಂದು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.

ಗೀತಾ ಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ 7 ದಿನ ನಡೆಯುವ ಶ್ರೀಕೃಷ್ಣ ಸಪ್ಪೋತ್ಸವ ಹಾಗೂ ಸಂಜೀವಿನಿ ಸಂಘಗಳ ಸದಸ್ಯರಿಂದ ತಯಾರಿಸಲ್ಪಟ್ಟ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು.

ಯಾವುದೇ ವಿಷಯದಲ್ಲಿ ಕೌಶಲ ಪಡೆಯಬೇಕು ಎಂಬುದು ಶ್ರೀಕೃಷ್ಣನ ಸಂದೇಶ. ಇದರ ಪ್ರತೀಕವಾಗಿ ಕರಕುಶಲ ವಸ್ತುಗಳ ಪ್ರದರ್ಶನ ಆಯೋಜಿಸಲಾಗಿದೆ. ಇದರೊಂದಿಗೆ ಸಮಾಜದಲ್ಲಿ ಏಕತೆ, ಸೌಹಾರ್ದ ಬೆಳೆಸುವ ನಿಟ್ಟಿನಲ್ಲಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಐದರು. ಕಿರಿಯ ಯತಿ ಶ್ರೀ ಸುಶೀಂದ್ರ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು.

ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಮಠದ ಕರಕುಶಲ ಪ್ರದರ್ಶನ ಪರಿಸರದಲ್ಲಿ ವಸ್ತುಗಳ ಆಯೋಜನೆ ಮಾಡುವುದಿಂದ ಕಲಾವಿದರ ಪ್ರತಿಭೆ ಅನಾವರಣಕ್ಕೆ ಅವಕಾಶ ಸಿಗುತ್ತದೆ. ಬದುಕು ಕಟ್ಟಿಕೊಳ್ಳುವ ವೃತ್ತಿಗೆ ಗೌರವ ನೀಡಿದಂತಾಗುತ್ತದೆ ಎಂದರು. ಕಟಪಾಡಿ ಕಾಳಿಕಾಂಬಾ ದೇವಸ್ಥಾನದ ಧರ್ಮದರ್ಶಿ ಮುರಹರಿ ಆಚಾರ್ಯ ಅವರಿಗೆ 'ಕೃಷ್ಣಾನುಗ್ರಹ' ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಮಾಜಿ

ಮಠದ ಪರಿಸರದಲ್ಲಿ ಕರಕುಶಲ ವಸ್ತುಗಳ ಪ್ರದರ್ಶನ ಆಯೋಜನೆ ಮಾಡುವುದರಿಂದ ಕಲಾವಿದರ ಪ್ರತಿಭೆ ಅನಾವರಣಕ್ಕೆ ಅವಕಾಶ ಸಿಗುತ್ತದೆ. ಬದುಕು ಕಟ್ಟಿಕೊಳ್ಳುವ ವೃತ್ತಿಗೆ ಗೌರವ ನೀಡಿದಂತಾಗುತ್ತದೆ.

ನಿಕಟಪೂರ್ವ ಶಾಸಕ ರಘಪತಿ ಭಟ್‌, ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಉದ್ಯಮಿ ಹರಿಪ್ರಸಾದ್ ರೈ, ಭುವನೇಂದ್ರ ಕಿದಿಯೂರು, ಸುರೇಂದ್ರ ಕಲ್ಯಾಣಪುರ, ಪ್ರದೀಪ್‌ಕುಮಾರ್ ‌ ಕಲ್ಕೂರ, ಪ್ರೇಮ್ ಮಿನೇಜಸ್ ಮತ್ತಿತರರು ಉಪಸ್ಥಿತರಿದ್ದರು. ರಮೇಶ್ ಭಟ್ ಕಾರ್ಯಕ್ರಮ ನಿರೂಪಿಸಿದರು.

 ಶ್ರೀ ಕೃಷ್ಣ ಜನ್ಮಾಷ್ಟಮಿ  ಪ್ರಯುಕ್ತ 10 ದಿನಗಳು ಕಾಲ ನಡೆಯುವ ವಸ್ತು ಪ್ರದರ್ಶನದಲ್ಲಿ ಸೈಕಲ್ ಬ್ರಾಂಡ್ ಅಗರಬತ್ತಿಯ ಸಂಸ್ಥೇಯ ವಿವಿಧ ಸುವಾಸನೆಯುಕ್ತ ಅಗರಬತ್ತಿ ಹಗೂ ಪೂಜಾ ಸಾಮಾಗ್ರಿಗಳು ಲಭ್ಯವಿರುತ್ತದೆ  ಎಂದು ಸಂಸ್ಥೆಯ ಮಾರಾಟ ವ್ಯವಸ್ಥಾಪಕ ಶೈಲೇಶ್ ಕುಮಾರ್ ತಿಳಿಸಿದರು

ಕೃಷ್ಣ ಮಠದಲ್ಲಿ ಶುಕ್ರವಾರ ಶ್ರೀಕೃಷ್ಣ ಸಪ್ಪೋತ್ಸವದಲ್ಲಿ 24.08.2024ರಂದು ಸಂಜೆ 7ರಿಂದ ಗಾಯಕಿ ದಿ.ಸುಬ್ಬಲಕ್ಷ್ಮೀ ಅವರ ಮೊಮ್ಮಕ್ಕಳಾದ ಎಸ್.ಐಶ್ವರ್ಯಾ ಮತ್ತು ಎಸ್. ಸೌಂದರ್ಯ ಚೆನ್ನೈ ಅವರಿಂದ ಕರ್ಣಾಟಕ ಸಂಗೀತ ಕಛೇರಿ ನಡೆಯಲಿದೆ.