ಕೊಡವೂರು ಗ್ರಾಮದ ಮೂಡುಬೆಟ್ಟಿನ ಸಹರಾ ಕ್ರಿಕೆಟರ್ಸ್ ಸಹಯೋಗದಲ್ಲಿ ಆದಿತ್ಯವಾರ ಕೆರೆ ಮಠದ ಗದ್ದೆಯಲ್ಲಿ ಕೆಸರಡು ಒಂಜಿ ದಿನ ಕಾರ್ಯಕ್ರಮ ಸಹಾರ ಕ್ರಿಕೆಟರ್ಸ್ನ ಅಧ್ಯಕ್ಷರಾದ ನಿಶಾನ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಶ್ರೀ ಗೋವಿಂದ ಹೆಬ್ಬಾರ್ ದೀಪ ಬೆಳಗಿಸಿ ಆಶೀರ್ವದಿಸಿದರು. ಶ್ರೀ ಸದಾನಂದ ವೈದ್ಯ ಇವರು ತುಳುನಾಡಿನ ಸಂಸ್ಕೃತಿಯಂತೆ ತೆಂಗಿನ ಗರಿಯ ಹೂವನ್ನು ಅರಳಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ದ ಸಂ ಸ,ಜಿಲ್ಲಾ ಸಂಚಾಲಕರಾದ ಸುಂದರ ಮಾಸ್ಟರ್ ಮಾತನಾಡಿ ಹಿಂದಿನ ಕಾಲದಲ್ಲಿ ತುಳುನಾಡಿನ ಜನರು ಆಟಿ ತಿಂಗಳಲ್ಲಿ ಕಳೆದ ಕಷ್ಟ, ಅಂದಿನ ಆಚಾರ ವಿಚಾರ, ತಿಂಡಿ ತಿನಸಿನ ಬಗ್ಗೆ ತಿಳಿಸಿದರು. ವೇದಿಕೆಯಲ್ಲಿ ಶ್ರೀ ಬಬ್ಬು ಸ್ವಾಮಿ ದೈವಸ್ಥಾನದ ಗುರಿಕಾರರಾದ ಭೋಜ ಕುಂದರ್, ಅಂಬೇಡ್ಕರ್ ಯುವಕ ಮಂಡಲದ ಅಧ್ಯಕ್ಷರಾದ ಸುರೇಶ್, ಅಂಬೇಡ್ಕರ್ ಮಹಿಳಾ ಮಂಡದ ಅಧ್ಯಕ್ಷೆ ಜಾನಕಿ, ಭ್ರಮರಾಂಬಿಕ ಭಜನಾ ಮಂಡಳಿ ಅಧ್ಯಕ್ಷರಾದ ರಂಜಿತ್, ಭ್ರಮರಾಂಬಿಕ ಭಜನಾ ಮಂಡಳಿಯ ಅಧ್ಯಕ್ಷೆ ಲಕ್ಷ್ಮಿ ಚೆಂಡ್ಕಲ, ಸ್ಥಳೀಯರಾದ ಇಬಾದ್ ಸಾಹೇಬ್, ದ ಸಂ ಸ ಗ್ರಾಮ ಶಾಖೆಯ ಸಂಚಾಲಕರಾದ ಶಿವಾನಂದ ಮೂಡಬೆಟ್ಟು, ಸುರೇಶ್ ಸುವರ್ಣ, ಸಂಜೀವ ಚೆಂಡ್ಕಲ ಉಪಸ್ಥಿತರಿದ್ದರು.
ಕೆಸರುಗದ್ದೆಯಲ್ಲಿ ನಡೆಸಿದ ಸ್ಪರ್ಧೆಗಳಿಗೆ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಸಮಾರಂಭದಲ್ಲಿ ಸುರೇಶ್ ಕಂಬಳಕಟ್ಟ, ದಿನೇಶ್ ಜವಣರ ಕಟ್ಟೆ, ಅನಿಲ್ ಮಲ್ಪೆ,ಮಹೇಶ್ ಅಕ್ಕಣಿ ಟೀಚರ್, ಸ್ಥಳೀಯ ಯುವಕ ಮಂಡಲ ಹಾಗೂ ಮಹಿಳಾ ಮಂಡಲದ ಸದಸ್ಯರೆಲ್ಲ ಇದ್ದರು. ಸಹಾರ ಕ್ರಿಕೆಟರ್ ತಂಡದ ಸದಸ್ಯರೆಲ್ಲ ಉಪಸ್ಥಿತಿಇದ್ದರು.
ನಿರೂಪಣೆಯನ್ನು ಕಲಾವಿದರಾದ ಶಂಕರ್ ದಾಸ್ ನಿರ್ವಹಿಸಿದರು, ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಸುರೇಂದ್ರ ಕೋಟ್ಯಾನ್ ಧನ್ಯವಾದ ನೀಡಿದರು.