ಬೆಂಗಳೂರು ಕಲಾಗ್ರಾಮದಲ್ಲಿ ಚಲನಚಿತ್ರತಾರೆ ಭಾವನಾ ರಾಮಣ್ಣ ಹಾಗು ಚಾರುಮತಿಯವರ ತಮ್ಮ ಹೂವು ಫೌಂಡೇಶನ್ ಫಾರ್ ಆರ್ಟ್ಸ್ ಮುಖಾಂತರ ನಡೆಸಿದ ರಾಷ್ಟ್ರೀಯ ಮಟ್ಟದ ಭರತನಾಟ್ಯ "ವರ್ಣ ಸ್ಪರ್ಧೆ" ಯಲ್ಲಿ ಉಡುಪಿಯ ಸೃಷ್ಟಿ ನೃತ್ಯ ಕಲಾ ಕುಟೀರದ ನಿರ್ದೇಶಕಿ ಡಾ ಮಂಜರಿ ಚಂದ್ರ ಪುಷ್ಪರಾಜ್ ಇವರ ಶಿಷ್ಯೆಯರಾದ ಪಿ ಜಿ ಪನ್ನಗಾ ರಾವ್ ಸೀನಿಯರ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ರೂ. 1,00,000/- ಹಾಗು ಸಾನ್ವಿ ರಾಜೇಶ್ ಜೂನಿಯರ್ ವಿಭಾಗದಲ್ಲಿ 3 ನೇ ಸ್ಥಾನ ಪಡೆದು ರೂ. 30,000/- ಬಹುಮಾನ ರೂಪದಲ್ಲಿ ಪಡೆದುಕೊಂಡಿದ್ದಾರೆ.
ಕುಮಾರಿ ಪನ್ನಗ ದೊಡ್ಡಣಗುಡ್ಡೆಯ ಶ್ರೀ ಗಣೇಶ್ ರಾವ್ ಹಾಗು ಸುಮಾ ಅವರ ಪುತ್ರಿ ಹಾಗೆಯೇ ಕುಮಾರಿ ಸಾನ್ವಿ ಕುಕ್ಕಿಕಟ್ಟೆಯ ಶ್ರೀ ರಾಜೇಶ್ ಹಾಗು ಉಷಾ ಅವರ ಪುತ್ರಿ.