ಕಾರ್ಕಳ: ಭಾರತೀಯರಾದ ನಾವು ಸೇವೆಯೇ ಪರಮ ಧರ್ಮವೆಂಬ ತತ್ವವನ್ನು ಸ್ವೀಕಾರ ಮಾಡಿ ಬಾಳುವವರು. ಇಂತಹ ಸೇವಾ ಮನೋಭಾವ ಗುಣಗಳನ್ನು ವಿದ್ಯಾರ್ಥಿಗಳಿಗೆ ಎಳವೆಯಿಂದಲೇ ಶಿಕ್ಷಕರು ಕಲಿಸಿಬೇಕಿದೆ. ಬದುಕಿನ ಸಾರ್ಥಕತೆಗೆ ಮಾನವೀಯ ಮೌಲ್ಯಗಳು ಭೂಷಣವಾಗಿದೆ. ಇಂತಹ ಸದ್ಗುಣಗಳಿಗೆ ವ್ಯಕ್ತಿತ್ವ ವಿಕಸನಗಳಿಗೆ ಸ್ಕೌಟ್ಸ್ ಗೈಡ್ಸ್ ಚಟುವಟಿಕೆಗಳು ಸಹಕಾರಿಯಾಗಿದೆ ಎಂದು ಭಾರತ್ ಸ್ಕೌಟ್ಸ್ ಗೈಡ್ಸ್ ರಾಜ್ಯ ಸಂಸ್ಥೆ ಮುಖ್ಯ ಆಯುಕ್ತ ಪಿ ಜಿ ಆರ್ ಸಿಂಧ್ಯಾ ಅವರು ಹೇಳಿದರು.
ಅವರು ಕಾರ್ಕಳದ ವರ್ಧಮಾನ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆ, ಸಾಣೂರು ಇಲ್ಲಿ ಜರಗಿದ ಶೈಕ್ಷಣಿಕ ವರ್ಷದ ಸ್ಕೌಟ್ಸ್ ಗೈಡ್ಸ್ ಚಟುವಟಕೆಗಳನ್ನು ಉದ್ಘಾಟಿಸಿ ಮಾತನಾಡಿದರು.
ಭಾರತ್ ಸ್ಕೌಟ್ಸ್ ಗೈಡ್ಸ್ ರಾಜ್ಯ ಸಂಸ್ಥೆಯು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ತಾಲೂಕುಗಳಿಗೆ ಸ್ಕೌಟ್ ಗೈಡ್ಸ್ ಚಟುವಟಿಕೆಗಳಿಗಾಗಿ ವಿಶೇಷವಾದಂತಹ ಕಾರ್ಯಕ್ರಮ ಗಳನ್ನು ರೂಪಿಸಿ ಪ್ರೋತ್ಸಾಹವನ್ನು ನೀಡುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಇಂದು ರಾಜ್ಯದ ಗ್ರಾಮೀಣ ನಗರ ಮಹಾನಗರಗಳಲ್ಲಿ ಸ್ಕೌಟ್ಸ್ ಗೈಡ್ ಚಟುವಟಿಕೆಗಳು ವಿದ್ಯಾರ್ಥಿಗಳಿಂದ ವಿಶೇಷವಾಗಿ ನಡೆಯುತ್ತಿದೆ.
ಸಮಾರಂಭದ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ ಬಿ.ಎ ಶುಭ ಹಾರೈಸಿದರು. ಉಡುಪಿ ಜಿಲ್ಲಾ ಗೈಡ್ ಕಮೀಷನರ್ ಶ್ರೀಮತಿ ಜ್ಯೋತಿ ಜೆ ಪೈ, ರಾಜ್ಯ ಸಂಸ್ಥೆಯ ಸಂಘಟನಾ ಆಯುಕ್ತ ಪ್ರಭಾಕರ್ ಭಟ್, ಉಡುಪಿ ಜಿಲ್ಲಾ ಕಾರ್ಯದರ್ಶಿ ಆನಂದ ಅಡಿಗ, ರಾಜ್ಯ ಸಹ ಸಂಘಟನಾ ಆಯುಕ್ತೆ ಸುಮನಾಶೇಖರ್, ಕಾರ್ಕಳ ಸ್ಥಳಿಯ ಸಂಸ್ಥೆಯ ಉಪಾಧ್ಯಕ್ಷ ಶ್ರೀ ಜಗದೀಶ ಹೆಗ್ಡೆ, ಕೋಶಾಧಿಕಾರಿ ಸತೀಶ್ ಶೆಟ್ಟಿ, ಉಪಾಧ್ಯಕ್ಷೆ ಸಾವಿತ್ರಿ ಮನೋಹರ್, ಸಹಾಯಕ ಜಿಲ್ಲಾ ಆಯುಕ್ತರಾದ ವೃಂದಾ ಹರಿಪ್ರಕಾಶ್ ಶೆಟ್ಟಿ, ಬೋಳ ಗೀತಾ ಸುಧೀರ್ ಕಾಮತ್, ಶ್ವೇತಾ ಕಾಮತ್, ಕಾರ್ಯದರ್ಶಿ ಗಣೇಶ್ ಜಾಲ್ಸೂರು ಜೊತೆ ಕಾರ್ಯದರ್ಶಿ, ಸೀಮಾ ಕಾಮತ್, ನಿಕಟ ಪೂರ್ವ ಕಾರ್ಯದರ್ಶಿ ನವೀನ್ ಕುಮಾರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಫ್ಲಾಕ್ ಲೀಡರ್ ಶಶಿಕಲಾ ಹೆಗ್ಡೆ ಎಲ್ಲರನ್ನು ಸ್ವಾಗತಿಸಿದರು. ಶಾಲಾ ಸಂಚಾಲಕ ನಿವೃತ್ತ ಬ್ಯಾಂಕ್ ಅಧಿಕಾರಿ ಕುಮಾರಯ್ಯ ಹೆಗ್ಡೆ ಅತಿಥಿ ಗಳನ್ನು ಹೂ ನೀಡಿ ಗೌರವಿ ಸಿದರು. ಗೈಡ್ ಕ್ಯಾಪ್ಟನ್ ಪ್ರಿಯಾ ಎಸ್.ನಾಯಕ್ ಹಾಗೂ ಕಬ್ ಮಾಸ್ಟರ್ ಸ್ವಾತಿಯವರು ಅತಿಥಿಗಳ ಪರಿಚಯವಿತ್ತರು. ಬನ್ನಿಸ್ ಲೀಡರ್ ಸ್ಮಿತಾ ಅವರು ಧನ್ಯವಾದವಿತ್ತರು. ಸ್ಕೌಟ್ ಮಾಸ್ಟರ್ ಕರ್ತವ್ಯ ಜೈನ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಸೌಮ್ಯ ದೀಪಿಕಾ ವಾಣಿ, ಅನಿತಾ, ಗ್ರೀಷ್ಮ ಹಾಗೂ ಪ್ರವೀಣ ರವರು ಸಹಕರಿಸಿದರು.