ಉಕ್ಕಿನ ಸಲಾಖೆಯಿಂದ ಸೀಯಾಳ ಕೀಳುವ ವೇಳೆ ವಿದ್ಯುತ್ ತಂತಿ ತಗಲಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಶಿರ್ವ ನಡೀಬೆಟ್ಟು ಎಂಬಲ್ಲಿ ಘಟಿಸಿದೆ.
ಶಿರ್ವ ನಡೀಬೆಟ್ಟುವಿನ ಪನಿಮಾರ್ ಮನೆಯ ಕೆಲಸದಾಳು ಸುರೇಶ್ ಶೆಟ್ಟಿ(68) ಮೃತರು.
ಮನೆಮಂದಿ ಮನೆಯಲ್ಲಿ ಇಲ್ಲದ ಸಂದರ್ಭ ಸುರೇಶ್ ಕಬ್ಬಿಣದ ಸಲಖೆಯಿಂದ ಸೀಯಾಳ ತೆಗೆಯಲು ಹೋಗಿದ್ದು, ತೋಟದಲ್ಲಿರುವ ಹೈ ಟೆನ್ಷನ್ ತಂತಿ ತಗಲಿ ಈ ಅವಘಡ ಸಂಭವಿಸಿದೆ. ಶಿರ್ವ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.