ದಿನಾಂಕ 25.8.24ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಡತಲ ಕಾರ್ಕಳ ತಾಲೂಕು ಇಲ್ಲಿ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ರಿಜಿಸ್ಟರ್ ಇವರ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ರಕ್ತದಾನ ಶಿಬಿರದ ಉದ್ಘಾಟನೆಯನ್ನು ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ಎಚ್ ಅಶೋಕ್ ರವರು ಉದ್ಘಾಟಿಸಿ ಗ್ರಾಮೀಣ ಪ್ರದೇಶವಾದ ಕಟ್ತಾಲದಲ್ಲಿ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಹಾಗೂ ಇತರ ಸಂಘಟನೆಯಿಂದ ಈ ಶಿಬಿರವನ್ನು ಹಮ್ಮಿಕೊಂಡಿದ್ದಕ್ಕೆ ಶ್ಲಾಘನೆ ವ್ಯಕ್ತಪಡಿಸುತ್ತಾ, ಆಧುನಿಕ ಯುಗದಲ್ಲೂ ಇದುವರೆಗೆ ರಕ್ತಕ್ಕೆ ಪರ್ಯಾಯ ವ್ಯವಸ್ಥೆ ಆಗದ ಕಾರಣ ರಕ್ತದಾನ ಮಹಾದಾನ ವಾಗಿದ್ದು ಜಾತಿ ಧರ್ಮ ಭೇದವಿಲ್ಲದೆ ಪ್ರತಿಯೊಬ್ಬರೂ ಈ ಮಹತ್ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು. ಉಡುಪಿ ಜಿಲ್ಲೆ, ರಕ್ತದಾನದಲ್ಲಿ ಮಹಾಕ್ರಾಂತಿಯನ್ನೇ ನಡೆಸಿದ್ದು ಈ ಶಿಬಿರದಲ್ಲಿ ಇವತ್ತು ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಭಾಗವಹಿಸಿದ್ದು ಶ್ಲಾಘನೀಯ ಮುಂದೆಯೂ ಗ್ರಾಮೀಣ ಭಾಗದಲ್ಲಿ ಇಂತಹ ಶಿಬರವನ್ನ ಆಯೋಜಿಸಿ ರಕ್ತದ ಕೊರತೆ ಆಗದಂತೆ ಸಂಘಟಿಕರು ಶ್ರಮಿಸುವಂತೆ ಕರೆ ನೀಡಿದರು. ಶಿಬಿರದ ಅಧ್ಯಕ್ಷತೆಯನ್ನು ಹರಿಶ್ಚಂದ್ರ ಹೆಗಡೆಯವರು ವಹಿಸಿದ್ದರು ವೇದಿಕೆಯಲ್ಲಿ ಸುಕೇಶ ಹೆಗಡೆ. ಡಾಕ್ಟರ್ ಚಂದ್ರಿಕಾ ಕಿಣಿ. ಲಯನ್ಸ್ ಕ್ಲಬ್ ನ ಡಾಕ್ಟರ್ ಪ್ರಮೋದ್ ಕುಮಾರ್ ಹೆಗಡೆ. ಅರುಣ್ ಕುಮಾರ್ ಹೆಗಡೆ. ರಕ್ತ ನಿಧಿ ವಿಭಾಗದ ಡಾಕ್ಟರ್ ಮಂಜುಶ್ರೀ ಪೈ. ಗೋಪಾಲ್ ಪೂಜಾರಿ, ಸುರೇಶ್ ಸುವರ್ಣ ಮುಂತಾದವರು ಹಾಜರಿದ್ದರು. ಈ ಶಿಬಿರದಲ್ಲಿ 60 ಜನ ಭಾಗವಹಿಸಿ ರಕ್ತವನ್ನು ಜಿಲ್ಲಾ ಆಸ್ಪತ್ರೆಗೆ ನೀಡಿದರು ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿ ಸಂತೋಷ ಆಚಾರ್ಯ ಸ್ವಾಗತಿಸಿ ಹರೀಶ್ ಹೆಗ್ಡೆ ಧನ್ಯವಾದಗೈದರು.