ನಿನ್ನ ಹುಟ್ಟು ಮತ್ತು ಸಾವಿಗೆ ಅನ್ಯಾಯ ಮಾಡಿರುವ, ಮಾಡುತ್ತಿರುವ ಭಾರತಮಾತೆ ಯ ಮಕ್ಕಳು ಕನ್ನಡಿಗರಾದ ನಮ್ಮನ್ನು ಕ್ಷಮಿಸಿಬಿಡು ರಾಯಣ್ಣ .
ಸ್ವಾತಂತ್ರ್ಯಕ್ಕೂ ಮುನ್ನ ನಮ್ಮ ನಾಡಿಗಾಗಿ ಬ್ರಿಟೀಷರ ವಿರುದ್ಧ ಯುದ್ಧವನ್ನು ಮಾಡಿ, ಬ್ರಿಟೀಷರ ಯಾವುದೇ ಗೊಡ್ಡು ಬೆದರಿಕೆಗೆ ಬಗ್ಗದೆ - ಕುಗ್ಗದೆ ನಾಡಿನ ಯುವಕರನ್ನು ಒಂದು ಗೂಡಿಸಿ ಯುವಕರ ಮನಸ್ಸಿನಲ್ಲಿ ದೇಶಾಭಿಮಾನ ತುಂಬಿ ನಿನ್ನದೇ ಸೈನ್ಯ ಕಟ್ಟಿಕೊಂಡು ಎದೆಗೊಟ್ಟು ನಿಂತ ವೀರ ನೀನು.
ರಾಯಣ್ಣನ ಈ ಮಾತು ಆ ವೀರ ಭೂಮಿ ಯಲ್ಲಿದ್ದ ನೂರಾರು ವರ್ಷದ ಆಲದ ಮರಕ್ಕೆ ಕೇಳಿತು, ಭಾರತ ಮಾತೆಗೆ ಕೇಳಿಸಿತು.
ರಾಯಣ್ಣನ ಆಸೆಯಂತೆ ಹಲವಾರು ವೀರರ ಪರಿಶ್ರಮದ ಫಲವಾಗಿ ಬ್ರಿಟೀಷರು ಅಗಸ್ಟ್ 14 - 1947ರ ಮದ್ಯ ರಾತ್ರಿ ನಮ್ಮ ದೇಶವನ್ನು ಬಿಟ್ಟು ಓಡಿದರು.
ರಾಯಣ್ಣ ಮರಣ ಹೊಂದಿ 116 ವರ್ಷಗಳ ನಂತರ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು.
ಭಾರತದಲ್ಲಿ ಸಂವಿಧಾನ ಜಾರಿಗೆ ಬಂದು ಭಾರತವು ಗಣರಾಜ್ಯವಾದದ್ದು ಜನವರಿ 26, 1950 ರಂದು ಈ ದಿನವೇ ವೀರ ಸಂಗೊಳ್ಳಿ ರಾಯಣ್ಣ ಮರಣ ಹೊಂದಿದ ದಿನ.
(ಜನವರಿ 26 - 1831 ರಲ್ಲಿ ರಾಯಣ್ಣನ ಮರಣ).
ರಾಯಣ್ಣನ ಜನನ ಮತ್ತು ಮರಣ ಕಾಕತಾಳೀಯವಲ್ಲ, ರಾಯಣ್ಣನ ದೇಶ ಪ್ರೇಮ, ಸ್ವಾಮಿ ನಿಷ್ಠೆಗೆ ಸೂರ್ಯ ಚಂದ್ರ ರಿರುವವರೆಗೆ ಅಜರಾಮರವಾಗಿರು ಎಂದು ಭಾರತ ಮಾತೆ ಆಶೀರ್ವದಿಸಿದ್ದಾಳೆ.
ಆದರೆ, ರಾಜ್ಯದಲ್ಲಿ ರಾಯಣ್ಣನ ಹೆಸರು ಬಳಸಿಕೊಂಡು ರಾಜಕೀಯ ಮಾಡಿದವರು, ಜಾತಿಗೆ ಸೀಮಿತವಾಗಿರಿಸಿಕೊಂಡವರ ಮಧ್ಯೆದಲ್ಲಿ ಮೇಧಾವಿ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ನನ್ನದೊಂದು ಹೃದಯಾಂತ ರಾಳದ ಮನವಿ.
ಅಗಸ್ಟ್ 15 ರಾಯಣ್ಣನ ಜನನ, ಮತ್ತು ಜನವರಿ 26 ರಾಯಣ್ಣನ ಮರಣ ಈ ಎರಡು ದಿನದಂದು ವೀರ ಯೋಧ ಸಂಗೊಳ್ಳಿ ರಾಯಣ್ಣನನ್ನು ಸರಕಾರ ಸ್ಮರಿಸುವಂತಾಗ ಬೇಕು, ರಾಯಣ್ಣನ ವೀರ ಮರಣಕ್ಕೆ ನ್ಯಾಯ ಒದಗಿಸಬೇಕು.
ನಿನ್ನ ಜನನ ಮತ್ತು ಮರಣವನ್ನು ನೆನೆಪಿಸದೆ ಅನಾದಿ ಕಾಲದಿಂದಲೂ ನಿನಗೆ ಅನ್ಯಾಯ ವೆಸಗಿದ್ದಕ್ಕೆ ನಮ್ಮೆಲ್ಲರನ್ನೂ ಕ್ಷಮಿಸಿಬಿಡು ರಾಯಣ್ಣ.
-ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ