ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಹಮ್ಮಿಕೊಂಡಂತಹ ಶ್ರೀಕೃಷ್ಣ ಮಾಸೋತ್ಸವದಲ್ಲಿ ಈ ಬಾರಿ ಕ್ರೀಡೋತ್ಸವವನ್ನು ಪರ್ಯಾಯ ಶ್ರೀಪಾದರ ಆಶಯದಂತೆ ವೈಶಿಷ್ಟ್ಯ ಪೂರ್ಣವಾಗಿ ನಡೆಸಲಾಗುವುದು. ಇದರ ಉದ್ಘಾಟನೆಯನ್ನು ಶ್ರೀಪಾದರು ತಾ.18/08/2024ನೇ ಆದಿತ್ಯವಾರ ಬೆಳಿಗ್ಗೆ 9.30 ಗಂಟೆಗೆ ಕನಕಗೋಪುರದ ಮುಂಭಾಗದಲ್ಲಿ ನೆರವೇರಿಸಲಿರುವರು. ನಂತರ ಶ್ರೀಕೃಷ್ಣ ಜ್ಯೋತಿಯನ್ನು ಬೆಳಗಿಸಿ ರಥಬೀದಿಯಲ್ಲಿ ಮೆರವಣಿಗೆ ನಡೆಸಲಾಗುವುದು.
ವಿಶೇಷವಾಗಿ ರಥಬೀದಿಯಲ್ಲಿ ಆ ದಿನ, ನಶಿಸಿ ಹೋಗುತ್ತಿರುವ ಆಟೋಟಗಳ ಸ್ಪರ್ಧೆಗಳನ್ನು ಆಯೋಜಿ ಸಲಾಗಿದೆ. ಮುಖ್ಯವಾಗಿ ಕಣ್ಣಿಗೆ ಬಟ್ಟೆ ಕಟ್ಟಿ ಮಡಕೆ ಒಡೆಯುವುದು, ಸೊಪ್ಪಿನ ಆಟ,ಜುಬಿಲಿ, ಸೈಕಲ್ ಚಲಾಯಿಸುವುದು, ಬಂಡಿ ಓಟ, ಟೊಂಕ ಆಟ, ಗೋಣಿಚೀಲ ಓಟ, ವಿಶಲ್ ಚೇರ್, ತಟ್ಟೆ ಓಟ/ನಡಿಗೆ, ಬೆಲ್ಚೆಂಡು, ಹಗ್ಗ ಗಂಟುಹಾಕುವಿಕೆ, ಸ್ಲೊ ಸೈಕಲ್ ರೇಸ್, ಕಾಳುಗಳ ವಿಂಗಡಿಸುವಿಕೆ, ದೇವರ ನಾಮದಿಂದ ಆಟ ಹೀಗೆ ಹತ್ತು ಹಲವು ಸ್ಪರ್ಧೆಗಳು ನಡೆಯಲಿದೆ.
ಈ ಸ್ಪರ್ಧೆಗಳಲ್ಲಿ ಮಕ್ಕಳು, ವಯಸ್ಕರು, ಮಹಿಳೆಯರು ಹಾಗೂ ಸಾರ್ವಜನಿಕರು ಭಾಗವಹಿಸಬಹುದು. ಎಲ್ಲಾ ಸದಸ್ಯರು ಹಾಗೂ ಆಸಕ್ತರು ಈ ವೈಶಿಷ್ಟ್ಯಪೂರ್ಣ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ ವಿನಂತಿಗಳು. ಹೆಚ್ಚಿನ ಮಾಹಿತಿಗಾಗಿ ಈಶ್ವರ ಚಿಟ್ಪಾಡಿ (9916009660), ದಿನೇಶ್ (98802 13650), ಪೂರ್ಣಿಮಾ ಜನಾರ್ದನ್ (9481214104) ಇವರನ್ನು ಸಂಪರ್ಕಿಸಬಹುದು.