ರೋಟರಿ ಉಡುಪಿ ಪ್ರಾಯೋಜಿತ ಶ್ರೀ ಕೃಷ್ಣ ಬಾಲನಿಕೇತನ ಇಂಟರಾಕ್ಟ ಕ್ಲಬ್ ನ ಪದಗ್ರಹಣ ಸಮಾರಂಭವು ಕುಕ್ಕಿಕಟ್ಟೆಯ ಶ್ರೀ ಕೃಷ್ಣ ಬಾಲನಿಕೇತನದಲ್ಲಿ ನೆರವೇರಿತು. ರೋಟರಿ ಉಡುಪಿ ಅದ್ಯಕ್ಷ ರೋ. ಗುರುರಾಜ ಭಟ್ ರವರು ಇಂಟರಾಕ್ಟ್ ಅಧ್ಯಕ್ಷೆ ಗೀತಾ ಮತ್ತು ಕಾರ್ಯದರ್ಶಿ ಸುಜಾತ ಅವರಿಗೆ ಪದಪ್ರಧಾನ ನೆರೆವೇರಿಸಿ ಶುಭಹಾರೈಸಿದರು. ಗತ ವರ್ಷದ ಅದ್ಯಕ್ಷ ಅಭಿಶೇಕ್ ಎಲ್ಲರನ್ನೂ ಸ್ವಾಗತಿಸಿದರು.ಗತ ವರ್ಷದ ಕಾರ್ಯದರ್ಶಿ ಲಕ್ಷ್ಮಿ ಕಳೆದವರ್ಷದ ಕಾರ್ಯಕ್ರಮದ ವರದಿಯನ್ನು ಒದಿದರು. ಇಂಟರಾಕ್ಟ ವಲಯ ಸಂಯೋಜಕ ರೋ.ರಿತೇಶ್ ಕೋಟ್ಯಾನ್, ಶ್ರೀ ಕೃಷ್ಣ ಬಾಲನಿಕೇತನದ ಕಾರ್ಯದರ್ಶಿ ರೋ. ರಾಮಚಂದ್ರ ಉಪಾಧ್ಯಾಯ, ಇಂಟರಾಕ್ಟ ಸಭಾಪತಿ ರೋ. ಸಾದನಾ ಮುಂಡ್ಕೂರ್ ಶುಭ ಹಾರೈಸಿದರು. ಇದೇ ಸಮಯದಲ್ಲಿ ಶ್ರೀಮತಿ ಜಯಲಕ್ಷ್ಮಿ ಆಚಾರ್ಯ ಅವರ ಸ್ನೇಹಿತರು ಕೊಡಮಾಡಿದ ಮಕ್ಕಳ ಶಾಲಾಸಮವಸ್ತ್ರವನ್ನು ಅವರು ವಿತರಿಸಿದರು. ಇಂಟರಾಕ್ಟ ಕಾರ್ಯದರ್ಶಿ ಸುಜಾತ ಕಾರ್ಯಕ್ರಮ ನಿರ್ವಹಣೆ ಮಾಡಿ, ಧನ್ಯವಾದ ಸಮರ್ಪಿಸಿದರು. ಬಾಲನಿಕೇತನದ ಮಾತಾಜಿಯವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.