ಗೆಳೆಯರ ಬಳಗ(ರಿ.) ಕಾರ್ಕಡ ಇದರ 36 ನೇ ವಾರ್ಷಿಕ ಮಹಾಸಭೆಯು ಕಾರ್ಕಡ ಹೊಸ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಳಗದ ಅಧ್ಯಕ್ಷ ಶ್ರೀ ಕೆ . ತಾರಾನಾಥ ಹೊಳ್ಳರ ಅಧ್ಯಕ್ಷತೆಯಲ್ಲಿ ಜರಗಿತು.ವಾರ್ಷಿಕ ವರದಿಯನ್ನು ಬಳಗದ ಕಾರ್ಯದರ್ಶಿ ಶ್ರೀ ಕೆ. ಶೀನ ಹಾಗೂಅಡಿಟ್ ಮಾಡಿದ ಆಯವ್ಯಯ ಕೋಶಾಧಿಕಾರಿ ಶ್ರೀ ಕೆ. ನಾಗರಾಜ ಉಪಾಧ್ಯ ಸಭೆಯಲ್ಲಿ ಮಂಡಿಸಿದರು. ಸಭೆ ಸರ್ವಾನುಮತದಿಂದ ಅಂಗೀಕರಿಸಿತು.
ಕಾರ್ಯಕಾರಿಣಿ ಸಭೆಯಲ್ಲಿ ಈ ಕೆಳಗಿನವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಅಧ್ಯಕ್ಷ-ಶ್ರೀ ಕೆ. ತಾರಾನಾಥ ಹೊಳ್ಳ, ಉಪಾಧ್ಯಕ್ಷ- ಶ್ರೀ.ಕೆ. ಶಶಿಧರ ಮಯ್ಯ., ಕಾರ್ಯದರ್ಶಿ- ಶ್ರೀ ಕೆ .ಶೀನ, ಜೊತೆ ಕಾರ್ಯದರ್ಶಿ- ಶ್ರೀ . ಕೆ. ಶ್ರೀಕಾಂತ ಐತಾಳ., ಖಜಾಂಚಿ- ಶ್ರೀ ನಾಗರಾಜ ಉಪಾಧ್ಯ.
ಕಾರ್ಯಕಾರಿ ಸಮಿತಿ: ಶ್ರೀ . ಕೆ. ಚಂದ್ರಕಾಂತ ನಾಯರಿ, ಶ್ರೀ ಕೆ. ಜಗದೀಶ ಆಚಾರ್ಯ, ಶ್ರೀ.ಕೆ. ಶ್ರೀಪತಿ ಆಚಾರ್ಯ, ಶ್ರೀ ಕೆ. ತಮ್ಮಯ್ಯ, ಶ್ರೀ. ಕೆ.ಉದಯ ಐತಾಳ, ಶ್ರೀ ಕೆ. ರಾಘವೇಂದ್ರ ದೇವಾಡಿಗ, ಬಡಾಹೋಳಿ ಶ್ರೀ ಕೆ. ಶೇಖರ, ಕೆ. ರಘ ಭಂಡಾರಿ ಇವರುಗಳು ಆಯ್ಕೆ ಆಗಿದ್ದಾರೆ.