Header Ads Widget

ವಿಜಯ ಕೊಡವೂರು ಉಡುಪಿ ನಗರಸಭೆಯ ಅಧ್ಯಕ್ಷ ಸ್ಥಾನಕ್ಕೆ ಸಮರ್ಥ ಅಭ್ಯರ್ಥಿ


ಉಡುಪಿ, ಆ. 9: ನಗರಾಭಿವೃದ್ಧಿ ಇಲಾಖೆಯ ಸ್ಥಳೀಯಾಡಳಿತ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ ಪಟ್ಟಿ ಸೋಮವಾರ ಪ್ರಕಟಿಸಿದ ಬೆನ್ನಲ್ಲಿ ಗದ್ದುಗೆ ಏರಲು ಲೆಕ್ಕಾಚಾರ, ಪೈಪೋಟಿ ಆರಂಭಗೊಂಡಿದೆ. ಉಡುಪಿ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲಾತಿ ನಿಗದಿಯಾಗಿದೆ.

ನಗರಸಭೆಯಲ್ಲಿ 35 ಸ್ಥಾನಗಳ ಪೈಕಿ ಬಿಜೆಪಿ 32 ಸದಸ್ಯ ಬಲವನ್ನು ಹೊಂದಿದ್ದು, ಎಲ್ಲ 32 ಸದಸ್ಯರು ಅಧ್ಯಕ್ಷ ಹುದ್ದೆಗೆ ಅರ್ಹರಿದ್ದಾರೆ. ಉಪಾಧ್ಯಕ್ಷ ಹುದ್ದೆಗೆ ಸಾಮಾನ್ಯ ಮಹಿಳೆ ಮೀಸಲು ಅಡಿಯಲ್ಲಿ ಎಲ್ಲ ಮಹಿಳಾ ಸದಸ್ಯರು ಅರ್ಹರಾಗಿದ್ದಾರೆ. ಯಾರಿಗೆ ಅಧಿಕಾರ ಭಾಗ್ಯ ಸಿಗಬಹುದು ಎಂಬ ಲೆಕ್ಕಾಚಾರ ರಾಜಕೀಯ ಪಡಸಾಲೆಯಲ್ಲಿ ಆರಂಭಗೊಂಡಿದೆ. ಜಾತಿ, ಪುರುಷ- ಮಹಿಳೆ ಮತ್ತು ಹಿರಿತನ, ನಾಯಕತ್ವ, ಪಕ್ಷ ಸಂಘಟನೆ ಆಧಾರದಲ್ಲಿ ಎಲ್ಲ ಸದಸ್ಯರನ್ನು ಪಕ್ಷದ ಮುಖಂಡರು ಅಳೆದು ತೂಗುತ್ತಾರೆ.

ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಆಯ್ಕೆ ಮಾಡುವ ಬಗ್ಗೆ ಪಕ್ಷದ ಕೋರ್‌ಕಮಿಟಿ ಸಭೆಯಲ್ಲಿ ನಿರ್ಧರಿಸಲಾಗುತ್ತದೆ. ಇದಕ್ಕೂ ಮುಂಚೆ ಎಲ್ಲ ಸದಸ್ಯರ ಅಭಿಪ್ರಾಯವನ್ನು ಕೋರ್ ಕಮಿಟಿ ಪಡೆಯಲಿದೆ. ಬಹುತೇಕ ಸದಸ್ಯರು ಅಧ್ಯಕ್ಷ ಉಪಾಧ್ಯಕ್ಷ ಗಾದಿಗೇರಲು ಉತ್ಸಾಹಿತರಾಗಿದ್ದು, ಪಕ್ಷದ ಪ್ರಮುಖ ಮುಖಂಡರು, ಜನಪ್ರತಿನಿಧಿಗಳ ಜತೆಗೆ ನಿರಂತರ ಚರ್ಚೆ, ಮಾತುಕತೆ ಮೂಲಕ ಲಾಬಿ ನಡೆಸುತ್ತಿದ್ದಾರೆ. ಅಧ್ಯಕ್ಷ ಉಪಾಧ್ಯಕ್ಷ ಹುದ್ದೆ ಆಕಾಂಕ್ಷಿಗಳು ಎಲ್ಲ ಸದಸ್ಯರಿಗೆ ದೂರವಾಣಿ ಕರೆ ಮಾಡಿ ಬೆಂಬಲ ಸೂಚಿಸುವಂತೆ ಮನವಿ ಮಾಡುತ್ತಿರುವ ಬೆಳವಣಿಗೆ ನಡೆಯುತ್ತಿದೆ.

ಈ ಬಾರಿ ಸಾರ್ವಜನಿಕ  ವಲಯದಲ್ಲಿ ಕೇಳಿ ಬರುತ್ತಿರುವ ಹೆಸರು ವಿಜಯ ಕೊಡವೂರು. ಸಮಾಜ ಸೇವೆಯ ಮೂಲಕ ಜನಾನುರಾಗಿಯಾಗಿರುವ ವಿಜಯ್ ರಾಜ್ಯ ಸರಕಾರದ, ಕೇಂದ್ರ  ಸರಕಾರದ ಯೋಜನೆಗಳನ್ನು  ಜನರ ಮನೆ ಬಾಗಿಲಿಗೆ ತಲುಪಿಸುವಲ್ಲಿ ಎತ್ತಿದ ಕೈ.  ಅಧಿಕಾರಿಗಳನ್ನು, ಸಾರ್ವಜನಿಕರನ್ನು ಒಂದೇ ಸೂರಿನಡಿಯಲ್ಲಿ ಸೇರಿಸಿ ಸಮಸ್ಯೆ ಬಗೆಹರಿಸುವಲ್ಲಿ ಬಹಳ ನಿಷ್ಣಾತರಿವರು.

ಪ್ರಕೃತಿ ವಿಕೋಪದ ಸಂದರ್ಭದಲ್ಲಿ ತನ್ನ ಜೀವ ಪಣಕ್ಕಿಟ್ಟು ಕೆಲಸ ಮಾಡುತ್ತಿರುವುದು ಜನ ಮೆಚ್ಚಿ ಹರಸಿರುವುದು ಒಂದೆಡೆಯಾದರೆ ತನ್ನೂರಿನ ರಸ್ತೆ ರಿಪೇರಿ ಆಗಲಿ ವಿದ್ಯುತ್ ಶಕ್ತಿ ಪೂರೈಕೆಯಲ್ಲಿ ವೆತ್ಯವಾದಾಗ ಯವಾದಲ್ಲಿ ಜನರಿಗೆ ಮೊದಲೇ ಈ ಬಗ್ಗೆ ಮಾಹಿತಿ ಯನ್ನು ತಿಳಿಸುವ ಕೆಲಸ. ಮನೆ ಮನೆಯಲ್ಲಿ ಬೇಡವಾದ ಗುಜುರಿ ವಸ್ತುಗಳನ್ನು ಒಂದೆಡೆಯಲ್ಲಿ ಸೇರಿಸಿ ಅದನ್ನು ಮಾರಾಟ ಮಾಡಿ ಅದರಲ್ಲಿ ಬಂದು ಹಣದಲ್ಲಿ  ವಿಕಲಾಂಗರಿಗೆ ಸಹಾಯ ಹಸ್ತ ನೀಡುತ್ತಿರುವುದು ಗಮನಾರ್ಹ ವಿಷಯ.

ರಾಜಕೀಯವಾಗಿಯೂ ಹೇಗೆ ಕೆಲಸವನ್ನು ನಿರ್ವಹಿಸಬೇಕು ಜನರೊಂದಿಗೆ ಹೇಗಿರಬೇಕು ಸಮಾಜ ಸೇವೆಯನ್ನು ಹೇಗೆ ಮಾಡ ಬೇಕು ಎಂಬುದನ್ನು ನಿರಂತರ ತಾನೇ ನಿಂತು ಮಾಡಿಕೊಂಡು ಬರುವ ಗಟ್ಟಿಗರು. ಅಬಾಲ ವೃದ್ಧರಾಗಿ ಎಲ್ಲರೊಂದಿಗೂ ಸಲುಗೆಯಿಂದ ಪ್ರೀತಿಯಿಂದ ಮಾತನಾಡಿಕೊಂಡು ಎಲ್ಲರ ಮನೆಯಲ್ಲೂ ಮನೆ ಮಗನಂತೆ ಓಡಾಡುತ್ತಿರುವ ವಿಜಯ ಕೊಡವೂರು ಬಗ್ಗೆ ಸಾರ್ವಜನಿಕರಲ್ಲಿ ಒಳ್ಳೆಯ ಅಭಿಪ್ರಾಯ ಇದೆ.

ಈ ಎಲ್ಲಾ ಒಳ್ಳೆಯ ಗುಣಗಳನ್ನು ಸಾರ್ವಜನಿಕರು ಮನಗಂಡು ಈ ಬಾರಿ ಉಡುಪಿ ನಗರಸಭೆಗೆ ದಕ್ಷ ನಿಸ್ವಾರ್ಥ ಅಧ್ಯಕ್ಷನನ್ನು ಆಯ್ಕೆ ಮಾಡುವಾಗ ವಿಜಯ ಕೊಡವೂರುರವರನ್ನು ಮರೆಯ ಬಾರದೆಂದು ಸಾರ್ವಜನಿಕರ ಅಭಿಪ್ರಾಯ.

- ಜನಾರ್ದನ್ ಕೊಡವೂರು