Header Ads Widget

32 ವರ್ಷಗಳಿಂದ ತಲೆ ಮರಿಸಿಕೊಂಡಿದ್ದ ವಾರಂಟು ಅಸಾಮಿ ವಶಕ್ಕೆ

 


ದಿನಾಂಕ: 13/02/1992 ನೇ ಸಾಲಿನಲ್ಲಿ ಶಿವರಾಮ ಎಂಬವರು ನೀಡಿದ ದೂರಿನ ಹಿನ್ನಲೆ ಮಣಿಪಾಲ ಠಾಣಾ ಪ್ರಕರಣ ಸಂಖ್ಯೆ 17/1992 ಕಲಂ,143.147,148,326,447,324 ಜೊತೆಗೆ 149 ಐ.ಪಿ.ಸಿ ಐಪಿಸಿ ರಿತ್ಯ 12 ಜನರ ಮೇಲೆ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ಸದರಿ ಪ್ರಕರಣದಲ್ಲಿ ಒಬ್ಬ ಆರೋಪಿ ಗಣೇಶ್‌ ಪ್ರಭು (54) ತಂದೆ: ವಿಠಲ ಪ್ರಭು, ಬಡಗಬೆಟ್ಟು ಮಣಿಪಾಲ ಉಡುಪಿ ರವರು 2001 ರಿಂದ ಮಾನ್ಯ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದು ಈತನ ವಿರುದ್ದ ಎಲ್.ಪಿ.ಸಿ ವಾರಂಟು ಹೊರಡಿಸಿರುತ್ತದೆ. 

ಎಲ್‌ ಪಿ ಸಿ ವಾರಂಟು ಆಸಾಮಿಯನ್ನು ಮಣಿಪಾಲ ಪೊಲೀಸ್ ಠಾಣಾ ಪೊಲೀಸ್‌ ಉಪ ನಿರೀಕ್ಷಕ ರಾಘವೇಂದ್ರ ಸಿ ಮತ್ತು ಹೆಚ್‌ ಸಿ ಪ್ರಸನ್ನ ಉಪ್ಪೂರು ರವರು ಪತ್ತೆ ಮಾಡಿ 32‌ ವರ್ಷಗಳಿಂದ ತಲೆಮರೆಸಿಕೊಂಡು ಬೆಂಗಳೂರಿನಲ್ಲಿ ವಾಸವಿದ್ದ ಆರೋಪಿ ಗಣೇಶ್‌ ಪ್ರಭು ರವರನ್ನು ದಿನಾಂಕ: 21/08/2024 ರಂದು ವಶಕ್ಕೆ ಪಡೆದು ವಾರೆಂಟ್‌ನೊಂದಿಗೆ ಮಾನ್ಯ ನ್ಯಾಯಾಧೀಶರ ಮುಂದೆ ಹಾಜರುಪಡಿಸಿರುತ್ತಾರೆ.