ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಮಹತ್ವದ ಅಭಿಯಾನ *ಮನೆಯೇ_ಗ್ರಂಥಾಲಯ* ನೂರು ದಿನಗಳಲ್ಲಿ 100 ಗ್ರಂಥಾಲಯಗಳ ಸ್ಥಾಪನೆಯ ವಿನೂತನ ಅಭಿ ಯಾನವು ' ಶತ ಸಂಭ್ರಮ ಕಾಣುತ್ತಿದ್ದು, ಈ ಕಾರ್ಯ ಕ್ರಮ ನಾಳೆ ಸೆಪ್ಟೆಂಬರ್ 3 ಮಂಗಳವಾರ ಉಡುಪಿಯ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಒಂದಾದ *ಡಾ. ಎ. ವಿ. ಬಾಳಿಗಾ ಮೆಮೋರಿಯಲ್ ಆಸ್ಪತ್ರೆಯಲ್ಲಿ* ಸಂಪನ್ನ ಗೊಳ್ಳಲಿದೆ.
ಈ ಕಾರ್ಯಕ್ರಮದಲ್ಲಿ ಉಡುಪಿಯ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕರಾದ ಉಡುಪಿ ವಿಶ್ವನಾಥ ಶೆಣೆೈ ಅವರು ಗ್ರಂಥಾಲಯಕ್ಕೆ ಕಪಾಟನ್ನು ನೀಡಿ ಉದ್ಘಾಟಿ ಸಲಿದ್ದಾರೆ.
ಆಸ್ಪತ್ರೆಯ ನಿರ್ದೇಶಕರು ಡಾ. ಪಿ. ವಿ. ಭಂಡಾರಿ ಅವರು ಅಧ್ಯಕ್ಷತೆ ವಹಿಸಲಿದ್ದು. ನಾಡಿನ ಪ್ರಸಿದ್ಧ ಕಥೆಗಾರರು, ವಿಮರ್ಶಕರು ಆದ ಡಾ.ಬಿ.ಜನಾರ್ದನ ಭಟ್ ಪುಸ್ತಕ ಗಳನ್ನು ನೀಡಿ ಚಾಲನೆ ನೀಡುತ್ತಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾದ ಪೂರ್ಣಿಮಾ, ಕಸಾಪ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಜಿಲ್ಲಾ ಸಹ ಕಾಯ೯ದರ್ಶಿ ಮೋಹನ ಉಡುಪ ಹಂದಾಡಿ ಉಪ ಸ್ಥಿತರಿರುತ್ತಾರೆ.