Header Ads Widget

ಜಿಲ್ಲಾಸ್ಪತ್ರೆಯಲ್ಲಿ ವಿಶ್ವ ಅಲ್ಜೈಮರ್ಸ್ ದಿನಾಚರಣೆ

ಉಡುಪಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತುಕರ್ನಾಟಕ ಮೆದುಳಿನ ಆರೋಗ್ಯ ಉಪಕ್ರಮ(KaBHI) ಇದರ ಜಂಟಿ ಆಶ್ರಯದಲ್ಲಿ ಬ್ರೈನ್ ಹೆಲ್ತ್ ಕ್ಲಿನಿಕ್ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ವಿಶ್ವ ಅಲ್ಜೈಮರ್ಸ್ ದಿನಾಚರಣೆ ನಡೆಯಿತು.

ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ಅಶೋಕ್ .ಎಚ್ ಉದ್ಘಾಟಿಸಿದ ಕಾರ್ಯಕ್ರಮದಲ್ಲಿ ಜಿಲ್ಲಾಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಹಾಗೂ ಮನೋರೋಗ ತಜ್ಞ ರಾದ ಡಾ.ವಾಸುದೇವ್ ರವರು ಸಾರ್ವಜನಿಕರಿಗೆ ಮರೆವಿನ ಕಾಯಿಲೆಯ ಲಕ್ಷಣ ಮತ್ತು ಚಿಕಿತ್ಸಾಕ್ರಮಗಳ ಕುರಿತ ಮಾಹಿತಿ ನೀಡಿ , ಅಲ್ಜೈಮರ್ಸ್ ಕಾಯಿಲೆಯನ್ನು ಆರಂಬಿಕ ಹಂತದಲ್ಲಿ ಪತ್ತೆ ಹಚ್ಚಿ ತತ್‌ಕ್ಷಣದ ಚಿಕಿತ್ಸೆ ನೀಡುವ ಮೂಲಕ ನಿಯಂತ್ರಣದಲ್ಲಿಡುವುದು ಅತೀ ಅನಿವಾರ್ಯವಾಗಿದ್ದು ಈ ಬಗ್ಗೆ ಪ್ರತಿಯೊಬ್ಬರೂ ಹಿರಿಯನಾಗರಿಕರ ಬಗ್ಗೆ ಕಾಳಜಿವಹಿಸಬೇಕಿದೆ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕುಷ್ಠ ರೋಗ ನಿವಾರಣಾ ಅಧಿಕಾರಿ ಡಾ.ಲತಾ ನಾಯಕ್ ಉಪಸ್ಥಿತರಿದ್ದರು.‌ ಕಾರ್ಯಕ್ರಮವನ್ನು ಸೈಕಾಲಿಜಿಸ್ಟ್ ಅಬ್ದುಲ್ ಸಮದ್ ಸ್ವಾಗತಿಸಿದರು, ಮೆದುಳಿನ ಆರೋಗ್ಯ ಉಪಕ್ರಮದ ಜಿಲ್ಲಾ ಸಂಯೋಜಕಿ ಅನುಷ ವಂದಿಸಿದ ಕಾರ್ಯಕ್ರಮದಲ್ಲಿ ಶೂಸ್ರಕ ರಾಮ್ ಕುಮಾರ್ ಮತ್ತು ಫಿಸಿಯೋತೆರಪಿಸ್ಟ್ ನೇಹಾ ಪ್ರೀಮಲ್ ಉಪಸ್ಥಿತರಿದ್ದರು.