ಚಿಟ್ಪಾಡಿ ವಲಯ ಬ್ರಾಹ್ಮಣ ಸಭಾದ ವಾರ್ಷಿಕ ಮಹಾಸಭೆಯು ಶ್ರೀನಿವಾಸ ದೇವಸ್ಥಾನದಲ್ಲಿ ಅಧ್ಯಕ್ಷ ವಿಶ್ವನಾಥ ಬಾಯರಿಯವರ ಅಧ್ಯಕ್ಷತೆಯಲ್ಲಿ ಜರುಗಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ಬ್ಯಾಂಕ್ ನ ಡಿಜಿಂಎಂ ರಾಜಗೋಪಾಲ್ ಭಟ್ ರವರು ಕಳೆದ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ವಿಭಾಗದಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರದೊಂದಿಗೆ ಸಮ್ಮಾನಿಸಿದರು.ಸಭಾದ ವಿಂಶತಿ ವರ್ಷದ ಪ್ರಯುಕ್ತ ದಾಂಪತ್ಯ ಜೀವನದಲ್ಲಿ 50 ಸಂವತ್ಸರ ಪೂರೈಸಿದ 7 ಜೋಡಿ ಹಿರಿಯ ದಂಪತಿಗಳನ್ನು ಇದೇ ಸಂದರ್ಭದಲ್ಲಿ ಫಲಪುಷ್ಪ ನೀಡಿ ಸನ್ಮಾನಿಸಲಾಯಿತು.ಸಭಾದ ಎಂಟು ಮಂದಿ ಮಾಜಿ ಅಧ್ಯಕ್ಷರನ್ನು ಮುಖ್ಯ ಅತಿಥಿಗಳು ಗೌರವಿಸಿದರು.ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ಡಾ ಗೋಪಾಲಕೃಷ್ಣ ಬಲ್ಲಾಳ್ ಸಿ ವಿ ಉರಾಳ್ ಡಾ ಪ್ರಕಾಶ ರಾವ್ ಲಕ್ಷ್ಮೀ ಉರಾಳ್ ವೀಣಾ ಬಾಯರಿ ಮಾಜಿ ಅಧ್ಯಕ್ಷರುಗಳಾದ ಶ್ರೀವತ್ಸ ಆಚಾರ್ಯ ವಿಟ್ಠಲ್ ಭಟ್ ಕೃಷ್ಣ ಭಟ್ ಕೃಷ್ಣದಾಸ ಆಚಾರ್ಯ ಅನಂತಕೃಷ್ಣ ಕೊಡ್ಲಾಯ ಗೋಪಾಲಕೃಷ್ಣ ಭಟ್ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಅಧ್ಯಕ್ಷ ವಿಶ್ವನಾಥ ಬಾಯರಿ ಸ್ವಾಗತಿಸಿದರು.ಕಾರ್ಯದರ್ಶಿ ಕೃಷ್ಣರಾಜ ಬಲ್ಲಾಳ್ ವಾರ್ಷಿಕ ವರಧಿ ವಾಚಿಸಿದರು.ಖಜಾಂಜಿ ರಾಘವೇಂದ್ರ ಕಲ್ಕೂರ್ ಲೆಕ್ಕಪತ್ರ ಮಂಡಿಸಿದರು.ಸುರೇಶ ಉಪಾಧ್ಯ ವಂದಿಸಿದರು.ಸಭಾದ ಸ್ಥಾಪಕಾಧ್ಯಕ್ಷ ಪ್ರೋ ವೇಣುಗೋಪಾಲ ಮುಳ್ಳೇರಿಯಾ ಕಾರ್ಯಕ್ರಮ ನಿರೂಪಿಸಿದರು.ಸಭಾ ಕಾರ್ಯಕ್ರಮದ ಮೊದಲು ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಸದಸ್ಯರಿಂದ ಶ್ರೀವಿಷ್ಣು ಸಹಸ್ರನಾಮಾವಳಿ ಪಠಣ ಜರುಗಿತು.