Header Ads Widget

ಕಿನ್ನಿಗೋಳಿ : ಎರಡು ತಲೆ ಇರುವು ಕರುವಿಗೆ ಜನ್ಮ ನೀಡಿದ ಗೋವು!


ಎರಡು ತಲೆ ಇರುವು ಕರುವೊಂದು ಜನನವಾದ ಘಟನೆ ಕಿನ್ನಿಗೋಳಿ ಸಮೀಪದ ದಾಮಸ್‌ಕಟ್ಟೆ ದೂಜಲಗುರಿ ನಿವಾಸಿ ಜಯರಾಮ ಜೋಗಿ ಎಂಬವರ ಮನೆಯಲ್ಲಿ ನಡೆದಿದೆ.

ಜಯರಾಮ ಜೋಗಿ ಅವರ ಮನೆಯ ಹಸು ಶನಿವಾರ ರಾತ್ರಿ ಎರಡು ತಲೆಹೊಂದಿರುವ ಕರುವಿಗೆ ಜನ್ಮನೀಡಿದೆ. ಪಶು ವೈದ್ಯರು ಹಸುವಿನ ಹೆರಿಗೆ ಮಾಡಿಸಿದ್ದು, ಕುರುವಿನ ಆರೋಗ್ಯ ಸ್ಥಿರವಾಗಿದೆ. ಕರುವಿಗೆ ಎರಡು ತಲೆ ಇದ್ದು ಒಂದೇ ದೇಹ ಇದೆ.

ಒಟ್ಟು ನಾಲ್ಕು ಕಣ್ಣುಗಳಿದ್ದು ಮಧ್ಯಭಾಗದಲ್ಲಿರುವ ಎರಡು ಕಣ್ಣುಗಳು ಚಲನೆಯಲ್ಲಿಲ್ಲ. ಎರಡು ಬಾಯಿ ಇದೆ. ಎರಡು ತಲೆಯಿಂದಾಗಿ ಎದ್ದು ನಿಲ್ಲಲು ಸಾಧ್ಯವಾಗದ ಈ ಕರುವಿಗೆ ವೈದ್ಯರ ಸಲಹೆಯಂತೆ ಫೀಡಿಂಗ್ ಬಾಟಲ್ ಮೂಲಕ ಹಾಲನ್ನು ನೀಡಲಾಗುತ್ತಿದೆ.